ಹುಬ್ಬಳ್ಳಿ: ಸುಮಾರು ವರ್ಷಗಳಿಂದ ರಸ್ತೆಯಿಲ್ಲದೆ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದರು. ಆದರೆ ಹಾಗು ಹೀಗೊ ಮಾಡಿ ರಸ್ತೆ ಭಾಗ್ಯ ಸಿಕ್ಕಿತ್ತು ಎನ್ನುವಷ್ಟರಲ್ಲಿ ಅವರಲ್ಲಿ ಮತ್ತಷ್ಟು ಆತಂಕ ಮೂಡಿದೆ....
ಹೌದು,,,, ವಾರ್ಡ್ ನಂ. 47 ರಲ್ಲಿ ಬರುವ ಲೋಕಪ್ಪನ ಹಕ್ಕಲದಲ್ಲಿ ಸ್ಲಂ ಬೋರ್ಡ್ ವತಿಯಿಂದ 300 ಮೀಟರ್ ದಷ್ಟು ರಸ್ತೆ ಮಾಡಲು ಕಾಮಗಾರಿ ಬಂದಿದೆ. ಆದರೆ ಅದು ರಸ್ತೆ ಬದಲಿಗೆ ಪೇವರ್ಸ್ ಹಾಕುತ್ತಿರುವುದರಿಂದ ಇಲ್ಲಿನ ನಿವಾಸಿಗಳಲ್ಲಿ ಇನ್ನಷ್ಟು ಆತಂಕ ಮೂಡಿದೆ. ಈಗಾಗಲೇ ಪೇವರ್ಸ್ ನ್ನು ಹಾಕಿದ್ದಾರೆ. ರಸ್ತೆ ಮನೆಗಳಿಂತ ಎತ್ತರವಾಗಿದ್ದರಿಂದ ಒಂದು ಚಿಕ್ಕ ಮಳೆಯಾದರು ಕೂಡ ಮನೆ ಒಳಗೆ ನೀರು ನುಗ್ಗುತ್ತದೆ. ನಮಗೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ ಎಂದು ಗೋಳಾಡುತ್ತಿದ್ದಾರೆ. ಅಧಿಕಾರಿಗಳು ಪೇವರ್ಸ್ ಹಾಕುವುದನ್ನು ಬಂದ್ ಮಾಡಿ ಎಂದರು ಕೂಡ, ಕಾಂಟ್ರಾಕ್ಟರ್ ಮಾಡಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಇಲ್ಲಿ ರಸ್ತೆ ಕಾಮಗಾರಿ ಮಾಡಲು ಭೂಮಿ ಪೂಜೆ ಮಾಡಿ ಹೋಗಿದ್ದರು. ಆದರೆ ಇಲ್ಲಿನ ನಿವಾಸಿಗಳು ಪೇವರ್ಸ್ ಹಾಕುವುದು ಬೇಡ ಸಿಸಿ ರಸ್ತೆ ಮಾಡಿಸಿ ಕೊಡಿ ಎಂದು ಕೇಳಿದಾಗ ಆಯ್ತು ಸಿಸಿ ರಸ್ತೆ ಮಾಡಿಸಿ ಕೊಡುತ್ತದೆ ಎಂದು ಹೇಳಿ ಹೋಗಿದ್ದರಂತೆ. ಆದರೆ ಇಲ್ಲಿ ಆಗಿದ್ದೆ ಬೇರೆ. ಇಲ್ಲಿನ ಕಾರ್ಪೊರೇಟರ್ ರೂಪಾ ಶೆಟ್ಟಿ ಹೇಳುತ್ತಾರೆ. ಇದು ವೈಜ್ಞಾನಿಕವಾಗಿದೆ ಜನರ ಒಪ್ಪಿಗೆಯಿಂದಲೇ ಪೇವರ್ಸ್ ಹಾಕಲಾಗಿದೆ ಎನ್ನುತ್ತಾರೆ.
ಒಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಗಳು ಇಲ್ಲಿನ ಜನರಿಗೆ ಯಾವುದು ಅನುಕೂಲ ಆಗುತ್ತೊ ಅದನ್ನೆ ಮಾಡಬೇಕಾಗಿದೆ.
Kshetra Samachara
04/02/2022 12:19 pm