ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಟ್ಯಾಂಕರ್ ಇದೆ ನೀರಿಲ್ಲಾ ! ಜನರ ನಿತ್ಯದ ಈ ಪರಿಸ್ಥಿತಿ ಕೇಳೋರಿಲ್ಲ

ಕುಂದಗೋಳ : ಇಲ್ಲೊಂದು ಗ್ರಾಮದ ಜನ ತಮ್ಮೂರಲ್ಲೇ ನೀರಿನ ಟ್ಯಾಂಕರ್, ಶುದ್ಧ ನೀರಿನ ಘಟಕ ಇದ್ರೂ ಕೂಡಾ ಕಳೆದ ಹಲವಾರು ದಿನಗಳಿಂದ ನಿತ್ಯ ಒಂದು ಕಿಲೋ ಮೀಟರ್ ದಾರಿ ಕ್ರಮಿಸಿ ಕೆರೆಯ ನೀರನ್ನು ತರುವ ಪರಿಸ್ಥಿತಿಗೆ ಸಿಲುಕಿದ್ದಾರೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರ ನೀರಿನ ಅಭಾವ ತಪ್ಪಿಸಲು ಶುದ್ಧ ನೀರಿನ ಘಟಕ, ನಿತ್ಯ ಬಳಸುವ ನೀರಿನ ಪ್ರತ್ಯೇಕ ಟ್ಯಾಂಕರ್, ಜಲ ಜೀವನ್ ಮಷಿನ್'ನಂತಹ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದ್ರೂ ಆ ಸೌಲಭ್ಯ ಪಶುಪತಿಹಾಳ ಗ್ರಾಮದ ಜನರಿಗೆ ಇದ್ದು ಇಲ್ಲದಂತಾಗಿದೆ.

ಈ ಕಾರಣ ಪಶುಪತಿಹಾಳದ ಪ್ಲಾಟಿನ ನಿವಾಸಿಗಳು ಬಿರು ಬಿಸಿಲಲ್ಲಿ ಕೆರೆ ನೀರನ್ನು ತರಲು ತಳ್ಳುವ ಗಾಡಿ ಅವಲಂಬಿಸಿದ್ದಾರೆ.

ಪಶುಪತಿಹಾಳ ಗ್ರಾಮದಲ್ಲಿನ ಒಂದು ಶುದ್ಧ ನೀರಿನ ಘಟಕ ಅವ್ಯವಸ್ಥೆ ತಲುಪಿದ್ರೇ, ಅದರಂತೆ ದಿನ ಬಳಕೆಯ ನೀರಿನ ಟ್ಯಾಂಕರ್'ನ ಮೋಟರ್ ಸರಿ ಇಲ್ಲಾ ಎಂಬ ಕಾರಣಕ್ಕೆ ಸ್ಥಗಿತವಾಗಿದೆ.

ಈ ಕಾರಣ ಪಶುಪತಿಹಾಳದ ಜನರಿಗೆ ನಿತ್ಯ ಬಳಕೆಯ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಬಗ್ಗೆ ತಾಲೂಕು ಪಂಚಾಯತ್ ಅಧಿಕಾರಿಗಳು ಗಮನಿಸಬೇಕಿದೆ.

Edited By : Shivu K
Kshetra Samachara

Kshetra Samachara

02/02/2022 09:58 pm

Cinque Terre

105.53 K

Cinque Terre

0

ಸಂಬಂಧಿತ ಸುದ್ದಿ