ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಕಳೆದ 50 ವರ್ಷಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲ. ಈಗ ಗ್ರಾಮದಲ್ಲಿ ಮತ್ತೊಂದು ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಕರೆಯಲಾಗಿದೆ. ಬೇರೆ ನ್ಯಾಯಬೆಲೆ ಅಂಗಡಿ ಗ್ರಾಮಕ್ಕೆ ಅವಶ್ಯಕತೆ ಇಲ್ಲ. ಬೇರೆ ನ್ಯಾಯಬೆಲೆ ಅಂಗಡಿಗೆ ಪರವಾನಿಗಿ ನೀಡಬಾರದು ಎಂದು ಆಗ್ರಹಿಸಿ ಉಪ್ಪಿನ ಬೆಟಗೇರಿ ಗ್ರಾಮಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕಳೆದ 50 ವರ್ಷಗಳಿಂದ ಸೊಸೈಟಿಯು ಯಾವುದೇ ತೊಂದರೆಯಾಗದಂತೆ ಪಡಿತರ ವಿತರಣೆ ಮಾಡುತ್ತಿದೆ. ಈಗ ಬೇರೆ ನ್ಯಾಯಬೆಲೆ ಅಂಗಡಿಗೆ ಪರವಾನಿಗಿ ನೀಡಿದರೆ ತೊಂದರೆಯಾಗುತ್ತದೆ. ಆದ್ದರಿಂದ ಬೇರೆಯವರಿಗೆ ಪರವಾನಿಗಿ ನೀಡಬಾರದು ಹಾಗೂ ಎಲ್ಲಾ ಕಾರ್ಡುದಾರರಿಗೂ ಸೀಮೆ ಎಣ್ಣೆ ವಿತರಿಸಬೇಕು ಎಂದು ಆಗ್ರಹಿಸಿದರು
Kshetra Samachara
01/02/2022 05:47 pm