ಧಾರವಾಡ: ನಯಾನಗರ ಮಲಪ್ರಭಾ ಡ್ಯಾಮ್‌ನಿಂದ ಧಾರವಾಡಕ್ಕೆ ಬರುವ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಬ್ಲಾಸ್ಟ್ ಆಗಿ ನೀರು ರಸ್ತೆ ಕಾಣದಂತೆ ಚಿಮ್ಮಿದ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿಯ ಸವದತ್ತಿ-ಧಾರವಾಡ ರಾಜ್ಯ ಹೆದ್ದಾರಿ ಮಧ್ಯೆ ಸಂಭವಿಸಿದೆ.
ಮಲಪ್ರಭಾ ಡ್ಯಾಮ್‌ನಿಂದ ಈ ಮುಖ್ಯ ಪೈಪ್‌ಲೈನ್ ಅಮ್ಮಿನಬಾವಿ ಪಂಪ್ ಹೌಸ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇಂದು ಇದ್ದಕ್ಕಿದ್ದಂತೆ ಪೈಪ್‌ಲೈನ್ ಬ್ಲಾಸ್ಟ್ ಆಗಿದ್ದರಿಂದ ವಾಹನ ಸವಾರರಿಗೆ ದಾರಿಯೇ ಕಾಣದಂತಾಗಿತ್ತು.
ಕೆಲಹೊತ್ತು ವಾಹನ ಸವಾರರು ಅಲ್ಲೇ ನಿಂತು ಕಾಯಬೇಕಾದ ಪ್ರಸಂಗ ಎದುರಾಯಿತು. ಪೈಪ್‌ಲೈನ್ ಒಡೆದಿದ್ದರಿಂದ ನೀರು ಹಿಮದಂತೆ ಬೀಳುತ್ತಿತ್ತು. ಇದರ ಮಧ್ಯೆಯೇ ಸಾರಿಗೆ ಸಂಸ್ಥೆ ಚಾಲಕನೋರ್ವ ತನ್ನ ಬಸ್ಸನ್ನು ದಾಟಿಸಿಕೊಂಡು ಹೋಗಿದ್ದಾನೆ.
ಸುದ್ದಿ ತಿಳಿದ ಕೂಡಲೇ ಅಮ್ಮಿನಬಾವಿ ಪಂಪ್‌ಹೌಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪೈಪ್‌ಲೈನ್ ದುರಸ್ತಿಗೊಳಿಸುವ ಕೆಲಸ ಮಾಡಿದ್ದಾರೆ.
Kshetra Samachara
27/01/2022 07:41 pm