ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಖಾಕಿಪಡೆಗೆ ತಲೆನೋವಾದ ಟ್ರಾಫಿಕ್ ನಿರ್ವಹಣೆ: ಪ್ಲೈ ಓವರ್, ಸ್ಮಾರ್ಟ್ ಸಿಟಿ ಕಾಮಗಾರಿ ಮಾಹಿತಿ ಕೊರತೆ..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಗರ ಕಮೀಷನರೇಟ್ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆಯೇ ದೊಡ್ಡ ತಲೆನೋವಾಗಿದೆ. ಕ್ರೈಂ ಪ್ರಕರಣ ಭೇದಿಸುವುದಕ್ಕಿಂತ ಟ್ರಾಫಿಕ್ ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡಲು ಬಂದಿರುವ ಸ್ಮಾರ್ಟ್ ಸಿಟಿ ಯೋಜನೆ ಒಂದುಕಡೆ ಆದರೆ. ಮತ್ತೊಂದು ಕಡೆಯಲ್ಲಿ ಪ್ಲೈಓವರ್ ಕಾಮಗಾರಿ. ಇದರಿಂದ ದಿನಕ್ಕೊಂದು ಮಾರ್ಗ ಬದಲಾವಣೆ, ಕ್ಷಣಕ್ಕೊಂದು ನಿರ್ಧಾರದಿಂದ ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಟ್ರಾಫಿಕ್ ನಿರ್ವಹಣೆ ಮಾಡುವುದೇ ದೊಡ್ಡ ತಲೆನೋವಾಗಿದೆ. ಕಿಕ್ಕಿರಿದ ರಸ್ತೆಗಳ ಮಧ್ಯದಲ್ಲಿಯೇ ವಾಹನ ಸವಾರರು ಪರದಾಡುತ್ತಿದ್ದು, ಇದನ್ನು ನಿರ್ವಹಿಸುವ ಜವಾಬ್ದಾರಿ ಪೋಲಿಸರದ್ದಾಗಿದೆ. ಇನ್ನೂ ಒಂದು ದಿನ ಗೋಕುಲ ರೋಡ್ ಕಾಮಗಾರಿ ಆರಂಭವಿದ್ದರೇ ಮತ್ತೊಂದು ದಿನ ಕಾಮಗಾರಿ ಸ್ಟಾಫ್ ಆಗಿರುತ್ತದೆ. ಅಲ್ಲದೇ ಕೆಲವು ದಿನ ಐಟಿ ಪಾರ್ಕ್ ಮುಂದಿನ ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದ್ದರೇ ಕೆಲವು ದಿನ ಬಂದ್ ಆಗಿರುತ್ತದೆ. ಇದರಿಂದ ಜನರು ಮಾರ್ಗದ ಬಗ್ಗೆ ಗೊಂದಲಕ್ಕೆ ಸಿಲುಕಿಕೊಂಡು ಪರದಾಡುವಂತಾಗಿದೆ.

ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ರೈಂ ಪ್ರಕರಣ ಹೆಚ್ಚುತ್ತಿವೆ. ಅಲ್ಲದೇ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜವಾಬ್ದಾರಿ ಜೊತೆಗೆ ಈಗ ಟ್ರಾಫಿಕ್ ನಿರ್ವಹಣೆಯೇ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಅಲ್ಲದೇ ಫ್ಲೈ ಓವರ್ ಕಾಮಗಾರಿ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ರವಾನೆ ಮಾಡದೇ ಇರುವುದರಿಂದ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ. ಇನ್ನೂ ಪೊಲೀಸರ ಕಷ್ಟವಂತೂ ಹೇಳ ತೀರದಾಗಿದ್ದು, ಟ್ರಾಫಿಕ್ ಕಿರಿಕಿರಿ ನಡುವೆ ಸಾರ್ವಜನಿಕರನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲಾಗಿದೆ.

ಒಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದ ಜನರು ಹಾಗೂ ಪೊಲೀಸ್ ಇಲಾಖೆ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಕಾಮಗಾರಿ ನಡೆಯುವ ಸ್ಥಳ ಹಾಗೂ ಮಾರ್ಗ ಬದಲಾವಣೆ ಮಾಹಿತಿ ನೀಡಲಿ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

Edited By : Shivu K
Kshetra Samachara

Kshetra Samachara

22/01/2022 01:16 pm

Cinque Terre

43.05 K

Cinque Terre

2

ಸಂಬಂಧಿತ ಸುದ್ದಿ