ಹುಬ್ಬಳ್ಳಿ: ಒಳ ಚರಂಡಿ ಮುಚ್ಚಿಹೋದ ಪರಿಣಾಮ ಚರಂಡಿ ತ್ಯಾಜ್ಯ ಮನೆ ಒಳಗೆ ನಿರಂತರವಾಗಿ ನುಗ್ಗಿ ಇಸ್ಲಾಂಪುರ ಓಣಿಯ ನಿವಾಸಿಗಳು ಅನಾರೋಗ್ಯಕ್ಕೆ ತುತ್ತುಗುತ್ತಿದ್ದಾರೆ.
ನಗರದ ವಾರ್ಡ್ ನಂ.77 ರಲ್ಲಿ ಬರುವ ಗೌಸಿಯಾಟೌನ್ ಇಸ್ಲಾಂಪುರ ಮುಖ್ಯ ರಸ್ತೆಯ ನಿವಾಸಿಗಳ ಗೋಳು ಇದಾಗಿದೆ. ಪಾಲಿಕೆ ಸೇರಿದಂತೆ ಶಾಸಕ ಪ್ರಸಾದ್ ಅಬ್ಬಯ್ಯ ಬಳಿ ಸಮಸ್ಯೆ ಹೇಳಿಕೊಂಡರು ಯಾವುದೇ ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.
ಕಳೆದ 10 ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳು ಪಾಲಿಕೆಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿ ಹೈರಾಣಾಗಿದ್ದಾರೆ. ಸೌಜನ್ಯಕ್ಕಾದರು ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸುವ ಕಾರ್ಯ ಮಾಡಿಲ್ಲ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿನ ನಿವಾಸಿಗಳು ಚರಂಡಿಯ ಕೆಟ್ಟ ವಾಸನೆ ನುಂಗಿಕೊಂಡು ಜೀವನ ಸಾಗಿಸುತ್ತಾ, ಈ ಒಳ ಚರಂಡಿ ತ್ಯಾಜ್ಯದಿಂದ ಎಂದು ಮುಕ್ತಿ ಸಿಗುವುದು ಎಂದು ಕಾದು ಕುಳಿತಿದ್ದಾರೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡಬೇಕಿದೆ.
Kshetra Samachara
19/01/2022 05:27 pm