ಹುಬ್ಬಳ್ಳಿ: ಸುಮಾರು ದಿನಗಳಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಕಸದ ರಾಶಿಯೇ ಬಿದ್ದಿದೆ. ಆದರೂ ಇದನ್ನು ಸ್ವಚ್ಛಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಇದನ್ನು ಕಂಡ ಜನ ಪಾಲಿಕೆ ಆವರಣದಲ್ಲೇ ಇಷ್ಟೊಂದು ಕಸ ಇದೆ. ಇನ್ನು ಇವರೇನು ಊರು ಸ್ವಚ್ಛ ಮಾಡ್ತಾರೆ? ಎಂದು ಮಾತಾಡಿಕೊಳ್ತಿದ್ದಾರೆ.
ಹೀಗೆ ಒಂದು ಕಡೆ ಆಸ್ಪತ್ರೆ.... ಇನ್ನೊಂದಡೆ ನಗರವನ್ನೇ ಸ್ವಚ್ಛತೆ ಕಾಪಾಡಬೇಕಾದ ಪಾಲಿಕೆ... ಇದರ ಮಧ್ಯದಲ್ಲಿ ಇರುವ ಪಾಲಿಕೆ ಉದ್ಯಾನದಲ್ಲಿ ಕಸದ ರಾಶಿ ಇದ್ದರೂ ಯಾರು ಕೂಡ ಕೇರ್ ಮಾಡ್ತಿಲ್ಲ. ಮೊದಲೇ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸ್ವಚ್ಛತೆ ಇಲ್ಲದಿದ್ದರೆ ರೋಗಗಳು ಜನರಿಗೆ ಫ್ರೀಯಾಗಿ ದೊರೆಯುವುದು ಮಾತ್ರ ಖಚಿತ. ಪಕ್ಕದಲ್ಲೇ ಆಸ್ಪತ್ರೆ ಇರುವುದರಿಂದ ರೋಗಿಗಳ ಸಂಬಂಧಿಕರು ಉದ್ಯಾನವನದಲ್ಲಿ ಊಟ ಮಾಡಲು, ವಿಶ್ರಾಂತಿ ಮಾಡಲು ಬರುತ್ತಾರೆ. ಆದ್ರೆ ಈ ನಡುವೆ ಈ ಕಸದ ರಾಶಿ ಕಂಡ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Kshetra Samachara
19/01/2022 11:57 am