ವಿಶೇಷ ವರದಿ : ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಕುಂದಗೋಳ : ಕಳೆದ ಹದಿನೈದು ಇಪ್ಪತ್ತು ವರ್ಷಗಳಿಂದ ಮೌನೇಶ್ವರ ಪ್ಲಾಟ್'ನಲ್ಲಿ ಅದೇ ಗುಬ್ಬು ನಾತ, ಚರಂಡಿ ತುಂಬ ಕಸ ಸುಧಾರಣೆ ಕಾಣದ ರಸ್ತೆ ನಡುವೆ ಮಳೆ ಬಂದರೇ ಸೊರುವ ಗುಡಿಸಲುಗಳಲ್ಲಿ ವಾಸಿಸುತ್ತಾ ತಮ್ಮ ಜಾಗದ ಹಕ್ಕು ಪಾತ್ರಕ್ಕಾಗಿ ಹೋರಾಟ ಮಾಡಿದವರಿಗೆ ಕೊನೆಗೂ ಜಯ ಸಿಕ್ಕಿದೆ.
ಮೌನೇಶ್ವರ ಪ್ಲಾಟ್'ನಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಮೊನ್ನೆಯಷ್ಟೇ ಜಾಗದ ಹಕ್ಕು ಪತ್ರ ನೀಡುವಂತೆ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕಿ ಕುಸುಮಾವತಿ ಶಿವಳ್ಳಿ ಖುದ್ದು ಮೌನೇಶ್ವರ ಪ್ಲಾಟಿಗೆ ಭೇಟಿ ಜನರ ಸಮಸ್ಯೆ ಆಲಿಸಿ 38 ಕುಟುಂಬಗಳಿಗೆ ಮೌನೇಶ್ವರ ಪ್ಲಾಟ್'ನಲ್ಲಿ ನಿವೇಶನ ಉಳಿದವರಿಗೆ ಅಮರಶಿವ ಪ್ಲಾಟ್'ನಲ್ಲಿ ನಿವೇಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದ್ರೇ, ಇಲ್ಲಿನ ನಿವಾಸಿಗಳು ಮಳೆಗಾಲಕ್ಕೂ ಮೊದಲೇ ನಮಗೆ ನಿವೇಶನ ನೀಡಿ ಎನ್ನುತ್ತಿದ್ದಾರೆ, ಕಾರಣ ಮತ್ತೆ ಮಳೆಗಾಲ ಆರಂಭವಾದ್ರೇ ಅದೇ ಕಷ್ಟ ಸೂರಿಲ್ಲದೆ ಉನ್ನಲು ಕೂಳಿಲ್ಲದೆ ಕಾಲ ಕಳೆಯುವ ದುರ್ಗತಿಗೂ ಮೊದಲು ನಿವೇಶನ ಕೊಟ್ರೇ ಒಳಿತು ಎನ್ನುತ್ತಿದ್ದಾರೆ.
ಒಟ್ಟಾರೆ ಕಳೆದ ಮೂರು ವರ್ಷದ ಅತಿವೃಷ್ಟಿಗೆ ಎಲ್ಲಿಲ್ಲದ ತಾಪತ್ರಯ ಪಟ್ಟ ಮೌನೇಶ್ವರ ಪ್ಲಾಟ್ ನಿವಾಸಿಗಳು ಮಳೆಗಾಲಕ್ಕೂ ಮೊದಲೇ ನಿವೇಶನ ಹಂಚಿಕೆ ಮಾಡಲು ಮನವಿ ಮಾಡಿದ್ದಾರೆ.
Kshetra Samachara
19/01/2022 08:20 am