ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಬಂಗಾರಪ್ಪ ಬಡಾವಣೆಗೆ ಬಂಗಾರದಷ್ಟೇ ತುಟ್ಟಿಯಾಗಿದೆ ಮೂಲಸೌಕರ್ಯ

ಅಣ್ಣಿಗೇರಿ: ಪಟ್ಟಣದ ಬಂಗಾರಪ್ಪ ಬಡಾವಣೆ ನಿವಾಸಿಗಳ ಗೋಳು ಹೇಳಲಾರದಷ್ಟು, ಪ್ರತಿದಿನ ಬೆಳಿಗ್ಗೆಯಾದರೆ ಸಾಕು ನಿವಾಸಿಗಳ ತೊಂದರೆಗಳು ಪ್ರಾರಂಭವಾಗುತ್ತದೆ. ಶೌಚಾಲಯದಿಂದ ಹಿಡಿದು ಕುಡಿಯುವ ನೀರು, ರಸ್ತೆ ಹೀಗೆ ಹಲವಾರು ಸಮಸ್ಯೆಗಳು ರಾತ್ರಿ ಮಲಗುವವರೆಗೂ ಸಮಸ್ಯೆಗಳು ಮುಗಿಯುವುದಿಲ್ಲ ಇಲ್ಲಿನ ನಿವಾಸಿಗಳದ್ದು.

ರಾಜ್ಯ ಸರ್ಕಾರ ಎಲ್ಲ ಬಡ ವರ್ಗದ ಜನರಿಗೆ ಮೂಲಭೂತ ಸೌಕರ್ಯ ಒದಗಿಸುತ್ತೆ ಅಂತ ಹೇಳುತ್ತೆ. ಕುಡಿಯುವ ನೀರಿನ ಘಟಕ ಹಾಗೂ ಸಾರ್ವಜನಿಕರ ಶೌಚಾಲಯ ಕಟ್ಟಿಸಿ ವರ್ಷಗಟ್ಟಲೆ ಕಳೆದರು ಉಪಯೋಗಿಸುವ ಯೋಗ ಇಲ್ಲದಂತಾಗಿದೆ.ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯದ ಕಟ್ಟಡ ಸುತ್ತಲೂ ಕಸಕಡ್ಡಿ ಬೆಳೆದು ಹೊಲಸು ನೀರು ನಿಂತು ದುರ್ವಾಸನೆ ಬರುತ್ತಿದೆ.

ಇನ್ನು ರಸ್ತೆ,ಗಟಾರ ಸೇರಿದಂತೆ ಅನೇಕ ತರಹದ ಸಮಸ್ಯೆಗಳು ಇಲ್ಲಿ ತಾಂಡವವಾಡುತ್ತಿರುತ್ತದೆ. ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ.ಎಫ್.ಕಟಗಿ ಹಾಗೂ ತಾಲೂಕಿನ ದಂಡಾಧಿಕಾರಿ ಮಂಜುನಾಥ ಅಮಾಸೆ ರವರಿಗೂ ಇಲ್ಲಿನ ನಿವಾಸಿಗಳು ಮನವಿ ಪತ್ರಗಳನ್ನು ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು. ಒಟ್ಟಾರೆಯಾಗಿ ಬಂಗಾರಪ್ಪ ಬಡಾವಣೆ ಸಮಸ್ಯೆಗಳ ಆಗರವಾಗಿದೆ.

ವರದಿ: ಬಿ.ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Shivu K
Kshetra Samachara

Kshetra Samachara

17/01/2022 01:07 pm

Cinque Terre

26.32 K

Cinque Terre

0

ಸಂಬಂಧಿತ ಸುದ್ದಿ