ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಗೆ ಯಾವುದೇ ಯೋಜನೆ ಬಂದರೂ ಪ್ರಯೋಜನ ಆಗಲ್ಲ. ಅಲ್ಲದೇ ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಇದ್ದರೂ ಯಾವುದೇ ಪ್ರಯೋಜನವಂತೂ ನಮ್ಮ ಹುಬ್ಬಳ್ಳಿ ಜನರಿಗೆ ಇಲ್ಲವೇ ಇಲ್ಲ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮನೆಯ ಹತ್ತಿರ ರಸ್ತೆಯ ಅವ್ಯವಸ್ಥೆ ತಲೆದೋರಿದರೂ ಕ್ಯಾರೆ ಏನುತ್ತಿಲ್ಲ. ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಓಡಾಡುವ ರಮೇಶ ಭವನ ಹತ್ತಿರದ ರಸ್ತೆಯಲ್ಲಿ ದೊಡ್ಡ ಪ್ರಮಾಣದ ತೆಗ್ಗು ಬಿದ್ದು ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿದ್ದರೂ ಕೂಡ ಜನಪ್ರತಿನಿಧಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ರಸ್ತೆಯಲ್ಲಿಯೇ ಡ್ರೈನೇಜ್ ಹೋಲ್ ಕಳಪೆ ಕಾಮಗಾರಿಯಿಂದ ಸುಮಾರು ಹದಿನೈದು ಅಡಿಗಳಷ್ಟು ತೆಗ್ಗು ಬಿದ್ದಿದ್ದರೂ ಯಾರು ಕೂಡ ಲಕ್ಷ್ಯ ವಹಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ಹಾಗೂ ಪಾಲಿಕೆಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಜನರೇ ಸ್ವಯಂ ಪ್ರೇರಿತರಾಗಿ ಬ್ಯಾರಿಕೇಡ್ ಹಾಕಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ಇಷ್ಟು ಸ್ಮಾರ್ಟ್ ಸಿಟಿ ಯೋಜನೆ, ಸಿಆರ್ ಎಪ್ ಅನುದಾನದಲ್ಲಿ ಕೋಟಿ ಕೋಟಿ ಹಣ ಹಾಕಿದರೂ ಕೂಡ ಹುಬ್ಬಳ್ಳಿಯ ಅವ್ಯವಸ್ಥೆ ಮಾತ್ರ ಸರಿಯಾಗುತ್ತಿಲ್ಲ.
ಒಟ್ಟಿನಲ್ಲಿ ಜನಪ್ರತಿನಿಧಿಗಳು ಇರುವುದು ಜನರ ಅಭಿವೃದ್ಧಿ ಮಾಡಲೋ ಅಥವಾ ಜನರಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲೋ ಎಂಬುವುದೇ ಅರ್ಥವಾಗುತ್ತಿಲ್ಲ.
Kshetra Samachara
15/01/2022 04:50 pm