ನವಲಗುಂದ : ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿ ಇಲ್ಲದ ಕಾರಣ ಶನಿವಾರದಂದು ಕುಟುಂಬವೊಂದು ತಮ್ಮ ಕುಟುಂಬಸ್ತರ ಜಮೀನಿನಲ್ಲೇ ಶವಸಂಸ್ಕಾರ ಮಾಡಿದ ಘಟನೆ ನಡೆದಿತ್ತು. ಈ ಹಿನ್ನೆಲೆ ಸೋಮವಾರ ತಾಲೂಕಾ ಕಚೇರಿ ಎದುರು ಗ್ರಾಮಸ್ಥರು ಧರಣಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದರು.
'ಎಸ್'..! ಕಳೆದ 23 ವರ್ಷಗಳಿಂದ ಶವಸಂಸ್ಕಾರಕ್ಕೆ 20 ಗುಂಟೆ ರುದ್ರಭೂಮಿ ಇದ್ರೂ ಸಹ ಸೊಟಕನಾಳ ಗ್ರಾಮಸ್ತರಿಗೆ ಶವಸಂಸ್ಕಾರಕ್ಕೆ ಅಲ್ಲಿಗೆ ತೆರಳಲು ರಸ್ತೆ ಇಲ್ಲಾ, ಇದರಿಂದ ತಮ್ಮ ಸ್ವಂತ ಜಮೀನು ಅಥವಾ ಸಂಬಂಧಿಕರ ಜಮೀನುಗಳಲ್ಲಿ ಶವಸಂಸ್ಕಾರ ಮಾಡುವ ಪರಿಸ್ಥಿತಿ ಬಂದಿದೆಯಂತೆ. ಇನ್ನು ಜಮೀನು ಇಲ್ಲದೇ ಇದ್ದವರು ಎಲ್ಲಿ ಶವಸಂಸ್ಕಾರ ಮಾಡಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆ. ಇನ್ನು ಈ ಬಗ್ಗೆ ಹಲವು ಬಾರಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ರೆ ಕೇವಲ ಸರ್ವೇಗಂತಾ ಬರ್ತಾರೆ ಅನಂತರ ಅದನ್ನ ಮರೆತು ಬಿಡ್ತಾರೆ ಅನ್ನೋದು ಗ್ರಾಮಸ್ಥರ ಆಕ್ರೋಶ.
ಇನ್ನು ರಸ್ತೆ ಮಾಡಿ ಕೊಡದೆ ಇದ್ದರೆ ಗ್ರಾಮದಲ್ಲಿ ಸಾವು ಸಂಭವಿಸಿದರೆ ಶವವನ್ನು ನೇರವಾಗಿ ತಾಲೂಕಾ ಕಚೇರಿಗೆ ತಂದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿ, ಮನವಿ ಸಲ್ಲಿಸಿದರು. ಇನ್ನು ಈ ವೇಳೆ ಅಧಿಕಾರಿಗಳ ಮತ್ತು ಗ್ರಾಮಸ್ಥರ ಮಧ್ಯ ವಾಗ್ವಾದ ಏರ್ಪಟ್ಟಿತ್ತು.
Kshetra Samachara
10/01/2022 06:41 pm