ಕುಂದಗೋಳ : ನಮಸ್ಕಾರ ಕುಂದಗೋಳ ತಾಲೂಕಿನ ಮಹಾ ಜನತೆ, 2021 ಕಳೆದು 2022 ನೂತನ ವರ್ಷಕ್ಕೆ ನಾವು ನೀವೆಲ್ಲಾ ಪಾದಾರ್ಪಣೆ ಮಾಡಿದ್ದೇವೆ.
ಕಳೆದ 2021ರಲ್ಲಿ ನಿಮ್ಮ ಕುಂದಗೋಳ ತಾಲೂಕಿನಲ್ಲಿ ಪಬ್ಲಿಕ್ ನೆಕ್ಸ್ಟ್ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದು, ಅದೆಲ್ಲಾ ನಿಮ್ಮ ಸಹಕಾರ, ವೀಕ್ಷಣೆ ಮತ್ತು ಪ್ರೋತ್ಸಾಹದಿಂದಲೇ ಎಂಬುದು ನಮ್ಮ ಹೆಮ್ಮೆ.
ಮೊದಲನೇಯದಾಗಿ ಪಟ್ಟಣ ಪಂಚಾಯಿತಿ ಮಳಿಗೆಗಳಿಗೆ ಟೆಂಡರ್ ಭಾಗ್ಯ ಒದಗಿ ಬಂದಿದ್ದು ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿ ಬಳಿಕವೇ ರೈತ ಸಂಪರ್ಕ ಕೇಂದ್ರದಲ್ಲಿ ನಿರ್ಮಾಣವಾಗಿ ಉದ್ಘಾಟನೆ ಕಾಣದೆ ಉಳಿದಿದ್ದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಅಲ್ಪ ಸಂಖ್ಯಾತರ ಹಾಸ್ಟೇಲ್'ನ ಕಟ್ಟಡಗಳು ಉದ್ಘಾಟನೆಗೆ ನಮ್ಮ ವರದಿಯೇ ಫಲಶೃತಿ ವಿಶೇಷವಾಗಿ ರೈತ ಸಂಪರ್ಕ ಕೇಂದ್ರಗಳನ್ನು ಕೃಷಿ ಸಚಿವ ಬಿ.ಸಿ.ಪಾಟಿಲ್ ಉದ್ಘಾಟಿಸಿರುವುದು ಕುಂದಗೋಳಿಗರ ಬೆಂಬಲಕ್ಕೆ ಸಾಕ್ಷಿ.
ಇದಲ್ಲದೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆ, ಚರಂಡಿ, ಶೌಚಾಲಯ, ವಿದ್ಯುತ್ ಸಮಸ್ಯೆ, ಶುದ್ಧ ನೀರಿನ ಘಟಕ, ಕೆರೆ ಸ್ವಚ್ಚತೆ, ರಸ್ತೆ ಅಭಿವೃದ್ಧಿಗೆ ನಮ್ಮ ವರದಿ ಕೈ ಗನ್ನಡಿಯಾಗಿ ಕೆಲಸ ಮಾಡಿ ಅಭಿವೃದ್ಧಿಗೆ ಪೂರಕವಾಗಿದೆ.
ಬೀಳುವ ಹಂತದಲ್ಲಿ ಪಟ್ಟಣ ಬಿಟ್ಟು ದೂರವಿದ್ದ ಅಂಚೇ ಕಚೇರಿ ಮಾರ್ಕೇಟ್'ಗೆ ಸ್ಥಳಾಂತರ ಮಾಡಿಸಿದ್ದು ನಮ್ಮ ವರದಿ, ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ಅಭಿವೃದ್ಧಿ ಹಾಗೂ ಬಂದ್ ಆಗಿದ್ದ ಬಸ್ ಸಂಚಾರ ಆರಂಭಕ್ಕೆ ನಾವು ಪ್ರಕಟಿಸಿದ ವರದಿಯೇ ಎಫೆಕ್ಟ್.
ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ನೀರಿನ ಸಮಸ್ಯೆಗೆ ಮುಕ್ತಿ ಕೊಟ್ಟಿದ್ದು ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಸಾಕ್ಷಿ, ಶಿಕ್ಷಕರ ಕನಸಿನ ಕೂಸು ಗುರುಭವನ ಇದೀಗ ಮುಖ್ಯಮಂತ್ರಿ ಕಚೇರಿ ಹಂತಕ್ಕೆ ಸುದ್ದಿ ತಲುಪಿಸಿದ್ದು ನಮ್ಮ ಹೆಮ್ಮೆ, ಕಳೆದ ಒಂಬತ್ತು ವರ್ಷದಿಂದ ಅನುದಾನ ಕಾಣದ ಪದವಿಪೂರ್ವ ಸರ್ಕಾರಿ ಕಾಲೇಜು ಅಭಿವೃದ್ಧಿಗೆ ಶಿಕ್ಷಣ ಇಲಾಖೆ ಕೈ ಜೋಡಿಸಿದ್ದು ನಮ್ಮ ವರದಿ ಫಲಶೃತಿ.
ಅಪರಾಧ, ತನಿಖೆ, ಸಿಸಿ ಕ್ಯಾಮರಾ ಅಳವಡಿಕೆ, ಸಂತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಮುಫ್ತಿ ಪೊಲೀಸ್ ಕಾರ್ಯಾಚರಣೆ, ಸರ್ಕಾರಿ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ ಕೊರತೆ, ಕಳಪೆ ಬೀಜದ ಪೂರೈಕೆ, ಅಷ್ಟೇ ಯಾಕೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನಾವು ಕೋವಿಡ್ ಸಂದರ್ಭದಲ್ಲೂ ಕ್ಷೇತ್ರದ ಸಮಗ್ರ ವರದಿ ನಿಮಗೆ ನೀಡಿ ಪ್ರಸ್ತುತ ಅತಿವೃಷ್ಟಿ ವರದಿಯಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಲು ಧ್ವನಿ ಎತ್ತಿದ ಧನ್ಯತಾ ಭಾವ ಹೊಂದಿದ್ದೇವೆ. 2022 ರಲ್ಲೂ ಅದೇ ವೇಗದೊಂದಿಗೆ ನಾವು ನಿಮ್ಮೊಂದಿಗೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
10/01/2022 11:12 am