ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕುಟುಂಬಸ್ಥರ ಜಮೀನಿನಲ್ಲೇ ಶವ ಸಂಸ್ಕಾರ ಮಾಡಲು ಮುಂದಾದ ಕುಟುಂಬ

ನವಲಗುಂದ: ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ದಾರಿ ಇಲ್ಲದೇ, ಕುಟುಂಬವೊಂದು ತಮ್ಮ ಮನೆಯ ಸದಸ್ಯೆಯೊಬ್ಬರ ಶವವನ್ನು ತಮ್ಮ ಕುಟುಂಬಸ್ಥರ ಜಮೀನಿನಲ್ಲಿ ಶವಸಂಸ್ಕಾರ ಮಾಡಲು ಮುಂದಾಗಿದ್ದಾರೆ.

ಹೌದು! ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದ ಸಿದ್ದಮ್ಮ ನಿಂಗಪ್ಪ ಆನಂದಿ ಎಂಬುವವರು ವಿಧಿವಶರಾಗಿದ್ದು, ಅವರ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ದಾರಿಯೇ ಇಲ್ಲದಂತಾಗಿದೆ. ಹೀಗಾಗಿ ಸಿದ್ದಮ್ಮ ಅವರ ಶವವನ್ನು ಕುಟುಂಬಸ್ಥರ ಜಮೀನಿನಲ್ಲೇ ಸಂಸ್ಕಾರ ಮಾಡಲು ಇಡೀ ಕುಟುಂಬ ನಿರ್ಧಾರ ಮಾಡಿದೆ.

ಸೊಟಕನಾಳ ಗ್ರಾಮದಲ್ಲಿ ಸರ್ಕಾರದಿಂದ 20 ಗುಂಟೆ ಸ್ಥಳವನ್ನು ರುದ್ರಭೂಮಿಗಾಗಿ ನೀಡಲಾಗಿದೆ. ಆದರೆ, ರುದ್ರಭೂಮಿಗೆ ತೆರಳಲು ದಾರಿಯೇ ಇಲ್ಲದಿರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಕಳೆದ 20 ವರ್ಷಗಳಿಂದ ಈ ಸಮಸ್ಯೆ ಇದ್ದು, ಇದುವರೆಗೂ ಆ ಸಮಸ್ಯೆ ಬಗೆಹರೆದಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗೆ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲವಂತೆ, ಪರಿಹಾರ ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ನವಲಗುಂದ ತಾಲೂಕಾ ಕಚೇರಿ ಆವರಣದಲ್ಲಿ ಸತ್ಯಾಗ್ರಹ ಮಾಡುವುದಾಗಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ ಅವರು ಸಹ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರಂತೆ, ಅದೇನೇ ಇರಲಿ ಸರ್ಕಾರ ಬೇರೆ ವಿಷಯಗಳಿಗೆ ತಕ್ಷಣ ಸ್ಪಂದಿಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇಂತಹ ನೋವಿನ ವಿಷಯಗಳಿಗೆ ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕಿದೆ. ಹಲವಾರು ವರ್ಷಗಳಿಂದ ಸ್ಮಶಾನಕ್ಕೆ ತೆರಳಲು ಸ್ಥಳವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಗ್ರಾಮದ ಜನರಿಗೆ ಪರಿಹಾರ ನೀಡಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Nagesh Gaonkar
Kshetra Samachara

Kshetra Samachara

09/01/2022 06:26 pm

Cinque Terre

112.86 K

Cinque Terre

0

ಸಂಬಂಧಿತ ಸುದ್ದಿ