ನವಲಗುಂದ : ವಾರಾಂತ್ಯ ಕರ್ಫ್ಯೂ ನಿಂದಾಗಿ ಈಗಾಗಲೇ ಜನಸಾಮಾನ್ಯರು ತತ್ತರಿಸುವಂತಾಗಿದೆ. ಊರಿಂದ ಊರಿಗೆ ಪ್ರಯಾಣ ಬೆಳೆಸಿದ ಅದೆಷ್ಟೋ ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಬಸ್ ಗಳ ಕೊರತೆಯಿಂದಾಗಿ ಪರದಾಟ ನಡೆಸುವಂತಹ ದುಸ್ಥಿತಿ ಬಂದೊದಗಿದೆ.
'ಎಸ್' ಇಂತದ್ದೇ ಪರಿಸ್ಥಿತಿ ಭಾನುವಾರ ನವಲಗುಂದ ಬಸ್ ನಿಲ್ದಾಣದಲ್ಲಿ ಕಂಡು ಬಂತು. ಹೌದು ಭಾನುವಾರವೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಇದರಿಂದ ನವಲಗುಂದ ಬಸ್ ನಿಲ್ದಾಣದಲ್ಲಿ ಬಸ್ ಗಳ ಕೊರತೆ ಕೊಂಚ ಹೆಚ್ಚಿದಂತೆ ಕಾಣುತ್ತಿತ್ತು. ಬಸ್ಸುಗಳ ಸೌಲಭ್ಯವಿದೆ ಎನ್ನುವ ನಂಬಿಕೆ ಮೇಲೆ ಪ್ರಯಾಣ ಬೆಳೆಸಿದ್ದ ಅದೆಷ್ಟು ಪ್ರಯಾಣಿಕರು ಇಂದು ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತುಕೊಂಡಿರುವ ದೃಶ್ಯಗಳು ಕಂಡುಬಂದಿವೆ.
Kshetra Samachara
09/01/2022 03:25 pm