ಕುಂದಗೋಳ: ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ ಎಂಬಂತೆ ಇಂದು ಸಿ.ಆಯ್.ಸಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಅದರಗುಂಚಿಯ ಎನ್.ಎಸ್.ಎಸ್ ಘಟಕಗಳ ಹಾಗೂ ನೆಹರು ಯುವ ಕೇಂದ್ರ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಮಳೆ ನೀರು ಸಂಗ್ರಹಣೆ ಕುರಿತು ಜಾಗೃತಿ ಅಭಿಯಾನ ಎಂಬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಆಯ್. ಉಣಕಲ್ ಪ್ರಾಚಾರ್ಯರು ಪದವಿ ವಿಭಾಗ ಅದರಗುಂಚಿ, ಕಾರ್ಯಕ್ರಮದ ಉದ್ಘಾಟನೆಯನ್ನು ಮಲ್ಲಿಕಾರ್ಜುನ್ ಕಳ್ಳಿಮನಿ ಅಧ್ಯಕ್ಷರು ಗ್ರಾಮ ಪಂಚಾಯತ್ ಅದರಗುಂಚಿ, ಇವರು ನೆರವೇರಿಸಿಕೊಟ್ಟರು.
ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ಮಹಾದೇವಗೌಡ ಹುತ್ತನಗೌಡ್ರ ಸಹಾಯಕ ಅಭಿಯಂತರರು ಇವರು ಪ್ರೊಜೆಕ್ಟರ್ ಮೂಲಕ ವಿದ್ಯಾರ್ಥಿಗಳಿಗೆ ಮಳೆ ನೀರಿನ ಮಹತ್ವವನ್ನು ಕುರಿತು ಸ ವಿವರವಾಗಿ ವಿವರಿಸಿದರು. ಅದೇ ರೀತಿ ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನವನ್ನು ಸುರೇಶ ಗೋಕಾಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸಂಸ್ಥಾಪಕ ಅಧ್ಯಕ್ಷರು, ಮಂಜುನಾಥ್ ಎಂಟ್ರೂವಿ ಸಾಮಾಜಿಕ ಕಾರ್ಯಕರ್ತರು, ಹಾಗೂ ನಾಗರಾಜ್ ಕಮಡೊಳ್ಳಿ ರಾಷ್ಟ್ರೀಯ ಯುವ ಕಾರ್ಯಕರ್ತರು ನೆಹರು ಯುವ ಕೇಂದ್ರ ಧಾರವಾಡ ಇವರು ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅದೇ ಆರ್.ಎಂ.ಪಾಟೀಲ್ ಹಾಗೂ ಬಿ.ಜಿ.ತೋಟದ ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿಗಳು ಎಲ್ಲ ಎನ್.ಎಸ್.ಎಸ್ ಸ್ವಯಂ ಸೇವಕ ಸೇವಕಿಯರು ಕಾರ್ಯಕ್ರಮಕ್ಕೆ ಆಸೀನರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kshetra Samachara
07/01/2022 09:19 pm