ಕುಂದಗೋಳ : ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ನೀವೂ ಗಮನಿಸದೇ ಬಿಟ್ಟ ವಿಷಯವೊಂದು ಇದೀಗ ಸಮಸ್ಯೆಯಾಗಿ ಕಾಡುತ್ತಿದ್ದು ಗ್ರಂಥಾಲಯಕ್ಕೆ ಬರುವ ಓದುಗರಿಗೆ, ವಿದ್ಯಾರ್ಥಿಗಳಿಗೆ ಭಯ ತಂದಿದೆ.
ಕುಂದಗೋಳ ಪಟ್ಟಣದ ಗ್ರಂಥಾಲಯದ ಎದುರಿನಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಸ್ಥಾಪಿಸಿದ ನಾಮಫಲಕ ಬೀಳುವ ಹಂತದಲ್ಲಿದ್ದು, ನಿತ್ಯ ಗ್ರಂಥಾಲಯಕ್ಕೆ ಬರುವವರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ನಾಮಫಲಕದ ಕಂಬಗಳು ತುಕ್ಕು ಹಿಡಿಯುತ್ತಲಿದ್ದರೇ, ಈ ಭಾರಿ ಗಾತ್ರದ ನಾಮಫಲಕವನ್ನು ಕೇವಲ ಬೆಡ್ಡಿಂಗ್ ವಯರ್ ಸುತ್ತಿ ನಿಲ್ಲಿಸಲಾಗಿದ್ದು, ಯಾವಾಗ ಕೆಳಗೆ ಬೀಳತ್ತೋ ಗೊತ್ತಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಂಥಪಾಲಕರು ತಮಗೆ ಮನವಿ ಮಾಡಿದ್ದು, ಓದುಗರು ಸಹ ನಾಮಫಲಕದ ಭದ್ರತೆಗೆ ಒತ್ತಾಯ ಮಾಡುತ್ತಿದ್ದಾರೆ, ಈ ಬಗ್ಗೆ ಅಪಾಯಕ್ಕೂ ಮೊದಲೇ ಎಚ್ಚೆತ್ತುಕೊಳ್ಳಿಲು ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
06/01/2022 05:27 pm