ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಅದು ಮಹಾನಗರ ಪಾಲಿಕೆ ವ್ಯಾಯಾಮ ಶಾಲೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ವ್ಯಾಯಾಮ ಶಾಲೆ ಈಗ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಅಷ್ಟಕ್ಕೂ ಅದು ಎಲ್ಲೆ ಹೇಗಿದೆ ಅಲ್ಲಿನ ಸ್ಥಿತಿಗತಿ ತೋರಸ್ತೇವಿ ನೋಡಿ...
ಹೌದು.... ಒಂದು ಕಡೆ ಹಾಳು ಬಿದ್ದಿರುವ ಕಟ್ಟಡ, ಅಲ್ಲಲ್ಲೆ ಸಾರಾಯಿ ಬಾಟಲ್ ಗಳ ಹಾವಳಿ. ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹಳೇ ಹುಬ್ಬಳ್ಳಿ ವಾರ್ಡ್ ನಂಬರ 60 ರಲ್ಲಿ ಬರುವ ಚನ್ನಪೇಟನ ಮಹಾನಗರ ಪಾಲಿಕೆ ವ್ಯಾಯಾಮ ಶಾಲೆ. ಇಲ್ಲಿನ ಸ್ಥಳೀಯರ ಅನುಕೂಲಕ್ಕಾಗಿ ಮಹಾನಗರ ಪಾಲಿಕೆ ಸುಸಜ್ಜಿತ ವ್ಯಾಯಾಮ ಶಾಲೆ ಆರಂಭ ಮಾಡಿತ್ತು. ಆದರೇ ಅದೂ ಈಗ ನಿರ್ವಹಣೆ ಇಲ್ಲದೇ ಪಾಳು ಬಿದ್ದಿರುವ ಪರಿಣಾಮ ಈಗ ಇದು ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.
ಸುಮಾರು ಹತ್ತು ವರ್ಷಗಳಿಂದ ಈ ಕಟ್ಟಡ ಇಂತಹ ಸ್ಥಿತಿಗೆ ಬಂದ್ರೂ ಸಹ. ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು ಇತ್ತ ಗಮನ ಹರಿಸದೆ ಹಾರಿಕೆ ಉತ್ತರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಪಕ್ಕದಲ್ಲೇ ಶಾಲೆ ಇರುವ ಕಾರಣದಿಂದ ಮಕ್ಕಳ ಆರೋಗ್ಯದ ಮೇಲೆ ವಿಪರೀತ ಪ್ರಭಾವ ಬೀರುತ್ತದೆ. ಇನ್ನೂ ಈ ಕಟ್ಟಡ ತೆರವುಗೊಳಿಸಿ, ವ್ಯಾಯಾಮ ಶಾಲೆ ಬದಲು ಆರೋಗ್ಯ ಕೇಂದ್ರ ಅಥವಾ ಇನ್ನಿತರ ಸಾರ್ವಜನಿಕರ ಅನುಕೂಲಕರ ಕಟ್ಟಡ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಒಟ್ಟಿನಲ್ಲಿ ಸ್ಥಳೀಯರ ಆರೋಗ್ಯ ಹಿತದೃಷ್ಟಿಯಿಂದ ನಿರ್ಮಾಣವಾದ ವ್ಯಾಯಾಮ ಶಾಲೆ ಈಗ ಕುಡುಕರ ಅಡ್ಡೆಯಾಗಿದೆ. ಕೂಡಲೆ ಅಧಿಕಾರಿಗಳು ಇಲ್ಲಿ ಭೇಟಿ ನೀಡಿ ಕಟ್ಟಡ ಪರಿಶೀಲನೆ ನಡೆಸಬೇಕಿದೆ.
Kshetra Samachara
05/01/2022 05:54 pm