ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ : ಅಪೂರ್ಣ ಕಾಮಗಾರಿಗೆ ಟೋಲ್ ದಂಡ:ವಾಹನಗಳ ನಿತ್ಯ ಪರದಾಟಕ್ಕೆ ಮುಕ್ತಿಯಾವಾಗ.

ಅಳ್ನಾವರ : ಅಳ್ನಾವರದಿಂದ ಧಾರವಾಡದ ವರೆಗೆ 32 ಕಿ ಮೀ ರಸ್ತೆಯ ಮಾರ್ಗ ಮಧ್ಯದಲ್ಲಿರುವ ಸೇತುವೆಗಳ ಕಾರ್ಯ ಸ್ಥಗಿತದಿಂದ ನಿತ್ಯ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.

ಧಾರವಾಡದಿಂದ ಅಳ್ನಾವರ ಮಾರ್ಗವಾಗಿ ರಾಮನಗರ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರ ದಿಂದ ಶೇ.10,ಕೇಂದ್ರ ಸರ್ಕಾರದಿಂದ ಶೇ.10 ರಷ್ಟು ಅನುದಾನ ನೀಡಲಾಗಿದೆ.ಉಳಿದ ಶೇ.80 ರಷ್ಟು ಹಣವನ್ನು ಕಾಮಗಾರಿ ಗುತ್ತಿಗೆ ಪಡೆದವರು ಭರಿಸಬೇಕು.ಕಾಮಗಾರಿ ಸಂಪೂರ್ಣ ಗೊಂಡ ಬಳಿಕ ಗುತ್ತಿಗೆದಾರರು ರಸ್ತೆ ನಿರ್ವಹಣೆ ಜವಾಬ್ದಾರಿ ಜೊತೆಗೆ ಟೋಲ್ ಸಂಗಹ ಮಾಡಬೇಕು.

ಆದರೆ ಈ ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದವರು ಧಾರವಾಡ ಅಳ್ನಾವರ ಮಾರ್ಗ ಮದ್ಯದ ಕ್ಯಾರಕೊಪ್ಪ ಗೇಟ್ ಬಳಿ ಹಾಗೂ ಕುಂಬಾರಕೊಪ್ಪ ಗ್ರಾಮದ ಬಳಿ ಒಂದು ಸೇರಿ ಒಟ್ಟು ಎರಡು ರೈಲ್ವೆ ಮೇಲ್ಸೇತುವೆಗಳ ಕಾಮಗಾರಿಗಳನ್ನು ನಾಲ್ಕೈದು ವರ್ಷಗಳಾದರೂ ಪೂರ್ಣಗೊಳಿಸಿಲ್ಲ.ಈ ಸೇತುವೆ ಪಕ್ಕದಲ್ಲಿರುವ ಹಳೆ ಕಚ್ಚಾ ರಸ್ತೆಯಲ್ಲಿ ತಗ್ಗು ಗುಂಡಿಗಳಾಗಿದ್ದು,ಇಲ್ಲಿ ಸಾಗಲು ವಾಹನ ಸವಾರರು ನಿತ್ಯ ಹರಸಾಹಸ ಪಡುವಂತಾಗಿದೆ.

ಸೇತುವೆಗಳ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದ್ದರು ನಿತ್ಯ ಟೋಲ್ ಸಂಗ್ರಹಿಸಲಾಗುತ್ತಿದೆ. ಇದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಕಾಮಗಾರಿ ಪೂರ್ಣಗೊಳಿಸ ಬೇಕು ಎಂಬುದು ವಾಹನ ಸವಾರರ ಒತ್ತಾಯವಾಗಿದೆ.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್

ಅಳ್ನಾವರ

Edited By : Shivu K
Kshetra Samachara

Kshetra Samachara

05/01/2022 12:43 pm

Cinque Terre

52.38 K

Cinque Terre

3

ಸಂಬಂಧಿತ ಸುದ್ದಿ