ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್; ಚರಂಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

ಅಣ್ಣಿಗೇರಿ : ಪುರಸಭೆ ಅಧಿಕಾರಿಗಳೇ ಮೊದಲು ಜನರ ಸಮಸ್ಯೆಗಳತ್ತ ಗಮನ ಹರಸ್ರಿ, ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಭಾನುವಾರ ಸುದ್ದಿಯನ್ನು ಬಿತ್ತರಿಸಿತ್ತು. ಇದಕ್ಕೆ ಎಚ್ಚೆತ್ತು ಅಧಿಕಾರಿಗಳು ಇಂದು ಚರಂಡಿಯ ಸ್ವಚ್ಛತೆಗೆ ಮುಂದಾಗಿದ್ದರು.

ಹೌದು ಅಣ್ಣಿಗೇರಿ ಪಟ್ಟಣದ ಪುರಸಭೆ ಎದುರಿನ ಚರಂಡಿಯ ದುರಾವಸ್ಥೆ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಈಗ ಅಧಿಕಾರಿಗಳು ಚರಂಡಿಯ ಸ್ವಚ್ಛತೆಗೆ ಮುಂದಾಗಿದ್ದು, ನೀರು ಹಾದುಹೋಗಲು ಚಿಕ್ಕ ಸ್ಥಳವನ್ನು ಮಾಡಿ ಕೊಟ್ಟಿದ್ದಾರೆ. ಈ ಸಮಸ್ಯೆಗೆ ಅಧಿಕಾರಿಗಳು ಯಾವಾಗ ಶಾಶ್ವತ ಪರಿಹಾರ ನೀಡುತ್ತಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಇನ್ನು ಇಲ್ಲಿನ ಕೊಳಚೆಯಿಂದ ಸಾಂಕ್ರಮಿಕ ರೋಗದ ಭಯ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇಷ್ಟೇಲ್ಲಾ ಸಮಸ್ಯೆಗಳಲ್ಲಿ ಬದುಕು ನಡೆಸುತ್ತಿರುವ ಸ್ಥಳೀಯರಿಗೆ ಈಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಈ ಬಗ್ಗೆ ಅಧಿಕಾರಿಗಳು ಮುತುವರ್ಜಿವಹಿಸಿ ಶಾಶ್ವತ ಪರಿಹಾರ ನೀಡಲು ಮುಂದಾಗಬೇಕಿದೆ.

ಬಿ. ನಂದೀಶ, ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Shivu K
Kshetra Samachara

Kshetra Samachara

03/01/2022 07:35 pm

Cinque Terre

48.03 K

Cinque Terre

2

ಸಂಬಂಧಿತ ಸುದ್ದಿ