ಕುಂದಗೋಳ : ಇದೇ ಫೆಬ್ರವರಿ ತಿಂಗಳು 4.5 ಮತ್ತು 6ನೇ ದಿನಾಂಕದಂದು ಸಂಶಿ ಗ್ರಾಮದಲ್ಲಿ ನೂತನವಾಗಿ 1 ಕೋಟಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕರಿಶಿದ್ಧೇಶ್ವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಸಂಶಿ ಗ್ರಾಮದಲ್ಲಿ ನೆರವೇರಿತು.
ಸಂಶಿ ಗ್ರಾಮದ ಕರಿಶಿದ್ಧೇಶ್ವರ ದೇವಸ್ಥಾನದ ಅರ್ಚಕ ಶಿವಾನಂದ ಪೂಜಾರ ಕುಂದಗೋಳ ತಾಲೂಕಿನ ಗಣ್ಯರು ಸಮ್ಮುಖದಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಅತಿಥಿಗಳನ್ನು ಆಹ್ವಾನಿಸುವ ಬಗೆ ಕಾರ್ಯಕ್ರಮದ ಆಯೋಜನೆ ಕುರಿತು ನೆರೆದ ಸಭಿಕರ ಜೊತೆ ಮಾತನಾಡಿದರು.
ಈ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಸೇರಿದಂತೆ ನಾನಾ ರಾಜಕೀಯ ಗಣ್ಯರನ್ನು ಆಹ್ವಾನಿಸುವ ಬಗ್ಗೆ ಹಾಗೂ ದೇವಸ್ಥಾನದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು, ಈ ಸಂದರ್ಭದಲ್ಲಿ ಪರಮೇಶಪ್ಪ ನಾಯ್ಕರ್,ವಿಧ್ಯಾದರ ಸುಂಕದ, ಜಗದೀಶ್ ಉಪ್ಪಿನ್, ಹಾಲಪ್ಪ ತಡಾಳ, ಬಸಲಿಂಗಪ್ಪ ಕೋರಿ, ಇತರರು ಉಪಸ್ಥಿತರಿದ್ದರು.
Kshetra Samachara
29/12/2021 12:38 pm