ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 'ಶು' ಆಸ್ಪತ್ರೆ ಅಲ್ಲಾ ರೀ ಇದು... ಪಶು ಆಸ್ಪತ್ರೆ

ನವಲಗುಂದ : ಸರಿಯಾದ ನಿರ್ವಹಣೆ ಇಲ್ಲಾ, ಸರಿಯಾದ ನಾಮಫಲಕ ಇಲ್ಲ, ಚಿಕಿತ್ಸೆ ಜೊತೆ ವೈದ್ಯರ ಕೊರತೆ, ವೈದ್ಯರುಗಳ ಕಾರ್ಯನಿರ್ವಹಣೆ ಕೊರತೆ, ಹೇಳುತ್ತಾ ಹೊರಟರೆ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಇದು ನಮ್ಮ ನವಲಗುಂದದ ಪಶು ಆಸ್ಪತ್ರೆ...

ಎಸ್ 'ಶು ಆಸ್ಪತ್ರೆ ನವಲಗು' ಇಷ್ಟೇ ಕಾಣಿಸುವ ಈ ಫಲಕ ನಮ್ಮ ನವಲಗುಂದದ ಪಶು ಆಸ್ಪತ್ರೆ, ಇಲ್ಲಿನ ನಿರ್ವಹಣೆಯ ಕೊರತೆ ಎಷ್ಟರ ಮಟ್ಟಿಗೆ ಇದೆ ಅಂತಾ ಅಂದ್ರೆ ಸ್ವಚ್ಛತೆ ಇಲ್ಲಾ, ಖಾಸಗಿ ವಾಹನಗಳ ನಿಲುಗಡೆ ಆವರಣದಲ್ಲೇ ಆಗ್ತಿದೆ. ನಾಮ ಫಲಕ ಜಂಗು ಹತ್ತಿದ ಕಾರಣ ಯಾವಾಗ ಬಿಳ್ಳೂತೋ ಅನ್ನೋ ಆತಂಕದಲ್ಲಿ ಸಾರ್ವಜನಿಕರಿದ್ದಾರೆ. ರೈತರು ಇದು ಆಸ್ಪತ್ರೆ ಹೌದೋ,‌ ಅಲ್ಲವೋ ಎನ್ನುವ ಗೊಂದಲದಲ್ಲಿ ತಮ್ಮ ಜಾನುವಾರಗಳನ್ನು ಮರಳಿ ಮನೆಗೆ ಹೊಡೆದುಕೊಂಡು ಹೋದ ಉದಾಹರಣೆಗಳಿವೆ, ಅಲ್ಲದೇ ಇನ್ನೂ ಕೆಲವರು ಈ ಆಸ್ಪತ್ರೆ ಹುಡುಕಲು ಹರಸಾಹಸ ಪಟ್ಟಿದ್ದಾರೆ ಅದಕ್ಕೆ ಕಾರಣ ಸರಿಯಾದ ನಾಮಫಲಕವಿಲ್ಲದೆ ಇರುವುದು.

ಮನುಷ್ಯನಿಗೆ ಒಳ್ಳೆಯ ಚಿಕಿತ್ಸೆಗಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಆದರೆ ಮೂಕ ಪ್ರಾಣಿಗಳಿಗೆ ಚಿಕಿತ್ಸೆಗಾಗಿ ಇರುವ ಸರಕಾರಿ ಪಶು ಆಸ್ಪತ್ರೆಯೇ ಮೂಲಭೂತ ಸೌಕರ್ಯ, ವೈದ್ಯರ ಕೊರತೆ, ವೈದ್ಯರ ಕಾರ್ಯನಿರ್ವಹಣೆಯ ಕೊರತೆಯಿಂದ ಕೂಡಿದ್ರೆ ಮೂಕಪ್ರಾಣಿಗಳ ರೋಧನೆ ಕೇಳುವರು ಯಾರು...?. ಇನ್ನು ಈ ಬಗ್ಗೆ ಸಚಿವರು, ಆಸ್ಪತ್ರೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Shivu K
Kshetra Samachara

Kshetra Samachara

28/12/2021 02:05 pm

Cinque Terre

21.25 K

Cinque Terre

2

ಸಂಬಂಧಿತ ಸುದ್ದಿ