ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬಿಡ್ನಾಳದಲ್ಲಿ ಅಭಿನಯ ಕಾರ್ಯಾಗಾರ, ಕಿರು ನಾಟಕ ಪ್ರದರ್ಶನ

ಹುಬ್ಬಳ್ಳಿ : ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಸುನಿಧಿ ಕಲಾ ಸೌರಭ ಸಂಸ್ಥೆ ವತಿಯಿಂದ ತಾಲೂಕಿನ ಬಿಡನಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಈ ಶಾಲೆಯ ಮಕ್ಕಳಿಗಾಗಿ ಡಿಸೆಂಬರ್ 23 ಹಾಗೂ 24ರಂದು ಅಭಿನಯ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 60 ಮಕ್ಕಳು ಪಾಲ್ಗೊಂಡಿದ್ದರು .

ದಿನಾಂಕ 24ರಂದು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಸ್ಕೃತಿ ಮಂತ್ರಾಲಯ ತಜ್ಞ ಸದಸ್ಯರಾದ,ಡಾ. ಶಶಿಧರ್ ನರೇಂದ್ರ ಆಗಮಿಸಿ ಅಭಿನಯದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಪರಿಸರ ,ವಾಯು ಮಾಲಿನ್ಯ, ಹಾಗೂ ಕೊರೊನಾದ ಕುರಿತು ಮೂರು ಕಿರು ನಾಟಕಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದರು.

ಶಾಲೆಯ ಪ್ರಧಾನ ಗುರುಗಳಾದ ಎಂ .ಎಚ್. ಜಂಗಲಿ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಂಗಾಯಣ ಧಾರವಾಡ ಮಾಜಿ ನಿರ್ದೇಶಕ ಶ್ರೀ ಸುಭಾಶ್ ನರೇಂದ್ರ ಅವರು ವಹಿಸಿದ್ದರು. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ವೀಣಾ ಅಠವಳೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Edited By : Nirmala Aralikatti
Kshetra Samachara

Kshetra Samachara

25/12/2021 07:08 pm

Cinque Terre

69.84 K

Cinque Terre

0

ಸಂಬಂಧಿತ ಸುದ್ದಿ