ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ: ಸುಮಾರು ವರ್ಷಗಳಿಂದ ಹಾಳಾಗಿದ್ದ ರಸ್ತೆಗೆ, ಈಗ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಮಾರ್ಟ್ ಮಾಡಿದ್ದಾರೆ. ಅದರಂತೆ ಈ ಮಾರ್ಕೆಟ್ ಕಚ್ಚಾ ರಸ್ತೆ ಇದೀಗ ಪಕ್ಕಾ ರಸ್ತೆಯಾಗಿ ಮಾರ್ಪಟ್ಟಿದೆ.
ವಾಣಿಜ್ಯ ನಗರಿಯ ಬಹುದೊಡ್ಡ ಮಾರ್ಕೆಟ್ ಅಂದರೆ ಅದುವೇ ಗಾಂಧಿ ಮಾರ್ಕೆಟ್. ಆದ್ರೆ ಇಲ್ಲಿ ಸುಮಾರು 30 ವರ್ಷಗಳಿಂದ ರಸ್ತೆ ವ್ಯವಸ್ಥೆ ಇಲ್ಲದೆ ಇಲ್ಲಿನ ವ್ಯಾಪಾರಸ್ಥರು ಕಂಗೆಟ್ಟುಹೋಗಿದ್ದರು. ಸದ್ಯ ಸ್ಮಾರ್ಟ್ ಸಿಟಿ ಅಧಿಕಾರಿಗಳು ಪೇವರ್ಸ್ ಹಾಕುವ ಮೂಲಕ ಎಲ್ಲ ಸಮಸ್ಯೆಗಳಿಗೆ ಬರೆ ಎಳೆದಿದ್ದಾರೆ. ಇದರಿಂದ ಇಲ್ಲಿನ ಮಳಿಗೆಯ ಮಾಲೀಕರಲ್ಲಿ ಸಂತಸ ಮೂಡಿದೆ.
ಹಾಗೆಯೇ ಇಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಪೇವರ್ಸ್ ಹಾಕಿದ ನಂತರ, ಅವರಿಗೆ ಒಂದು ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಗಳು, ಇದೀಗ ಕ್ಯಾರೆ ಎನ್ನುತ್ತಿಲ್ಲವಂತೆ. ಆದಷ್ಟು ಬೇಗ ಇಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ವ್ಯವಸ್ಥೆ ಮಾಡಿಕೊಡಲು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ
ಒಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅಧಿಕಾರಿಗಳು ಜೀವನೋಪಾಯ ಮಾಡಿಕೊಡಬೇಕಾಗಿದೆ. ಅಷ್ಟೇ ಅಲ್ಲದೆ ಈಗಾಗಲೇ ಹಾಕಿರುವ ಪೇವರ್ಸ್‌ನ್ನು ವ್ಯಾಪಾರಸ್ಥರು ಹಾಳು ಮಾಡದಂತೆ ನೋಡಿಕೊಳ್ಳಬೇಕಾಗಿದೆ.
Kshetra Samachara
24/12/2021 01:59 pm