ಕುಂದಗೋಳ : ತಾಲೂಕಿನ ಶಿರೂರು ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಹೊನಲು ಬೆಳಕಿನ ಪಗಡೆ ಆಟದ ಸಮಾರಂಭವು ಅಭಿನವ ಪರಮಪೂಜ್ಯ ಬಸವನಜ್ಜನವರು ಜ್ಯೋತಿ ಬೆಳಗಿಸುವ ಮೂಲಕ ಪಗಡೆ ಆಟ ಪ್ರಾರಂಭಿಸಿದರು.
ಬಳಿಕ ಅಭಿನವ ಕಲ್ಯಾಣಪುರ ಬಸವಣ್ಣನವರು ಸ್ವತಃ ಪಗಡೆ ಆಟ ಆಡುವ ಮೂಲಕ ಜನಸಾಮಾನ್ಯರಲ್ಲಿ ಒಬ್ಬರಂತೆ ನೆರೆದ ಸಭಿಕರಿಗೆ ಪಗಡೆ ಆಟದ ಮಹತ್ವ ಸಾರಿ ಹೇಳಿದರು. ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗರು ಮೈ ನಡುಗುವ ಚಳಿಯಲ್ಲಿ ಶಿರೂರು ಗ್ರಾಮಕ್ಕೆ ಆಗಮಿಸಿ ಸಂಪೂರ್ಣ ರಾತ್ರಿ ಇಡೀ ಪಗಡೆ ಆಟದಲ್ಲಿ ಪಾಲ್ಗೊಂಡು ಆಧುನಿಕ ಕಾಲದಲ್ಲೂ ಪಗಡೆ ಆಟದ ಹುಮ್ಮಸ್ಸನ್ನು ತಿಳಿಸಿದರು.
ಈ ಸಂದರ್ಬದಲ್ಲಿ ಹಾಸಿಂ ಸಾಬ್ ಜಕಾಯತ್, ಈಶ್ವರ ಬೆಂಗೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಸುಭಾಸ್ ಗೋರ್ಪಡೆ, ಶಿವನಗೌಡ ಶಿದ್ದನಾಗೌಡ್ರ, ಬಸವಂತಪ್ಪ ಬಾರಕೇರ್, ಸಂಗ್ರಾಮ ಸೇನೆಯ ಅಧ್ಯಕ್ಷರಾದ ಎಸ್. ಎಸ್.ಪೂಜಾರ ಉಪಸ್ಥಿತರಿದ್ದರು.
Kshetra Samachara
24/12/2021 11:25 am