ಕುಂದಗೋಳ: ಇಲ್ಲೋಂದು ಹಳ್ಳಿ ಜನ ಮಳೆಗಾಲ ಬಂದ್ರೇ ಸಾಕು ಮಳೆಯಾದ್ರೇ ಸಾಕು ಹೊರಗಡೆ ಓಡಾಡೋಕೆ ಕಷ್ಟ ಪಡುವ ಸ್ಥಿತಿಗೆ ಸಿಲುಕಿ, ನಮ್ಮೂರಿಗೆ ರಸ್ತೆ ಭಾಗ್ಯ ಕೊಡಿ ಎಂದು ಅಧಿಕಾರಿ ಜನಪ್ರತಿನಿಧಿಗಳನ್ನು ಕೇಳಿ ಕೇಳಿ ಸುಸ್ತಾಗಿ ಹೋಗಿದ್ದಾರೆ.
ಅದ್ಯಾವ ಹಳ್ಳಿ ಎಂದ್ರಾ ? ಅದುವೇ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮ, ಈ ಊರಲ್ಲಿ ಜನ ಸಂಚಾರಕ್ಕೆ ಸರಿಯಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಬಂದ್ರೇ ಸಾಕು, ಈ ಊರಿನ ರಸ್ತೆಗಳು ರೀತಿ ನೀರು ರಾಡಿ ಸಂಗ್ರಹವಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟು ಬಿಡ್ತವೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮನವಿ ಮಾಡಿದ ಜನ ಈಗ ತಹಶೀಲ್ದಾರ'ಗೆ ನಮ್ಮೂರಲ್ಲಿ ಮಳೆಗಾಲದಲ್ಲಿ ಗ್ರಾಮ ವಾಸ್ತವ್ಯ ಮಾಡ್ರೀ ಎನ್ನುತ್ತಿದ್ದಾರೆ.
ಇನ್ನೂ ಮುಖ್ಯವಾಗಿ ಮಳೆಗಾಲದಲ್ಲಿ ಈ ರಸ್ತೆ ಸಂಚಾರ ಹಾಗೂ ಅವಶ್ಯಕ ಕೆಲಸ ನಿರ್ವಹಿಸಲು ಜನ ಯಾತನೆ ಪಡುತ್ತಿದ್ದು, ಈ ಬೇಸಿಗೆಯಲ್ಲಿ ನಮ್ಮೂರಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಕೊಡಿ ಎಂದು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
23/12/2021 06:12 pm