ಹುಬ್ಬಳ್ಳಿ : ವಾಣಿಜ್ಯ ನಗರಿ ಎಂದೆ ಪ್ರಖ್ಯಾತಿ ಹೊಂದಿರುವ ಹುಬ್ಬಳ್ಳಿ, ಕರ್ನಾಟಕದಲ್ಲಿ ತನ್ನದೇ ಆದಂತಹ ಸ್ಥಾನಮಾನ ಪಡೆದುಕೊಂಡಿದೆ. ಇನ್ನು ಬೆಂದಕಾಳುರು ಆಗಿದ್ದ ಬೆಂಗಳೂರು ಅತೀ ಉನ್ನತ ಮಟ್ಟದಲ್ಲಿ ಬೆಳೆವಣಿಗೆ ಹೊಂದಿದೆ. ಅದೇ ರೀತಿಯಾಗಿ ನಮ್ಮ ಹುಬ್ಬಳ್ಳಿಯೂ ತನ್ನ ಸ್ಥಾನವನ್ನು ಎಲ್ಲೆಡೆ ಪಸರಿಸಿಸುತ್ತಿದೆ. ಅಷ್ಟೇ ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ತನ್ನ ಛಾಪುನ್ನು ಮೂಡಿಸಿ ಈಗ ಉದ್ಯಮಿಗಳ ಪಾಲಿಗೆ ವರದಾನವಾಗಿ ಪರಿಣಮಿಸುತ್ತಿದೆ.
ನಮ್ಮ ಹೂಬಳ್ಳಿ ಆಗಿದ್ದ ಹುಬ್ಬಳ್ಳಿ ಇದೀಗ ಎಲ್ಲರ ಗಮನ ಸೆಳೆಯುವಂತಹ ಪ್ರೇಕ್ಷಣಿಯ ಸ್ಥಳವಾಗಿದೆ. ಉದ್ದಗಲಕ್ಕೂ ಮಾರುಕಟ್ಟೆ ಬೆಳೆಯುತ್ತಿದ್ದು, ನೃಪತುಂಗ ಬೆಟ್ಟದಕ್ಕಿಂತ ಎತ್ತರವಾದ ವರ್ಲ್ಡ್ ಸ್ಕ್ವೇರ್ ಬಿಲ್ಡಿಂಗ್, ಟೆಂಡರ್ ಶೋರ್ ರಸ್ತೆ, ಶೀರೂರ ಪಾರ್ಕ್, ಗೋಕುಲ್ ರೋಡ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನಮ್ಮ ಹುಬ್ಬಳ್ಳಿ ಮುಂದು ವರೆಯುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು ನಂತರ ನಮ್ಮ ಹೂಬಳ್ಳಿ ಎಲ್ಲರದಲ್ಲೂ ಮುಂದು ವರೆಯುತ್ತಿರುದಕ್ಕೆ, ಒಂದು ಕಡೆಯಿಂದ ಹೆಮ್ಮೆ ಅನಿಸುತ್ತಿದೆ.
ನಮ್ಮ ಹುಬ್ಬಳ್ಳಿ ನಮ್ಮ ಹೆಮ್ಮೆ ಎಂಬುದು ಎಲ್ಲ ಗಂಡು ಮೆಟ್ಟಿನ ನಾಡಿನ ಜನರಿಗೆ ಸಂತಸವಾಗುತ್ತಿದೆ. ಇನ್ನೂ ಕೆಲವೇ ವರ್ಷದಲ್ಲಿ ಬೆಂಗಳೂರನ್ನೂ ಹುಬ್ಬಳಿ ಹಿಂದಿಕ್ಕುವುದರಲ್ಲಿ ಡೌಟೇ ಇಲ್ಲ ಎನಿಸುತ್ತದೆ.
ಈರಣ್ಣ ವಾಲಿಕಾರ,,,
ಪಬ್ಲಿಕ್ ನೆಕ್ಸ್ಟ್,,,
Kshetra Samachara
17/12/2021 10:03 am