ಕುಂದಗೋಳ : ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಳೆದ 20 ವರ್ಷಗಳ ಹಿಂದೆ ನಿರ್ಮಿಸಿದ ವ್ಯಾಪಾರಿ ಮಳಿಗೆಗಳನ್ನು ಉಪಯೋಗಿಸಲು ಆಗದೆ ನಾಶ ಪಡಿಸಲು ಆಗದೆ ಕೈ ಬಿಟ್ಟಿದ್ದು, ಆ ಮಳಿಗೆಗಳು ಈಗ ಕುಡುಕರ ಅಡ್ಡೆಯಾಗಿ ಹಾಳು ಕೊಂಪೆಯಂತೆ ಭಾಸವಾಗಿವೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಈ ರೀತಿ ಕಳೆದ ಹಲವಾರು ವರ್ಷಗಳಿಂದ ಆರು ಮಳಿಗೆಗಳು ತನ್ನ ಅಸ್ತಿತ್ವ ಕಳೆದುಕೊಂಡು ನಿರ್ಜಿವವಾದರೂ, ಈ ಮಳಿಗೆ ಕೆಡವಿ ಹೊಸ ಮಳಿಗೆ ಕಟ್ಟಲು ಸರ್ಕಾರ ಅನುಮತಿ ನೀಡಿಲ್ಲ.
ಈ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಪತ್ರ ಬರೆದು ಮಳಿಗೆ ಕೆಡವಲು ಅವಕಾಶ ಕೋರಿದ್ದರು ಸರ್ಕಾರದಿಂದ ಉತ್ತರ ಸಿಕ್ಕಿಲ್ಲಾ, ಈ ಪರಿಣಾಮ ಹಳೇ ಮಳಿಗೆಗಳು ಕೊಂಪೆಯಂತೇ ಭಾಸವಾಗಿ ಹಾವು, ಚೇಳು ಸೇರಿ ಕುಡುಕರ ಅಡ್ಡೆಯಾಗಿ ಕಳೆದ 20 ವರ್ಷಗಳಿಂದ ಮಳಿಗೆ ಜಾಗ ಎರೆಡು ಉಪಯೋಗಕ್ಕೆ ಇಲ್ಲದಂತಾಗಿದೆ.
ಇನ್ನೂ ಈ ಮಳಿಗೆ ಹೊರತುಪಡಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಾಗದಲ್ಲಿ ಹಳೇ ಸರ್ಕಾರಿ ಕಾಲೇಜು ಕಟ್ಟಡ ಹಾಗೂ ಮೆಸ್ ಸಹ ಕಟ್ಟಡಗಳೂ ಉಪಯೋಗಕ್ಕೆ ಇಲ್ಲದೆ ಈ ರೀತೀ ಹಾಳಾಗಿ ಪುಂಡರ ಅಡ್ಡೆಯಾಗಿ ಯಾವಾಗ ? ಯಾರ ಜೀವಕ್ಕೆ ಅಪಾಯ ತರುತ್ತವೆಯೋ ? ತಿಳಿಯದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕಿದೆ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
16/12/2021 06:59 pm