ನವಲಗುಂದ : ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ಸಿದ್ದರಾಮೇಶ್ವರ ಮಠ ಈಗ ಶಿಥಿಲಾವಸ್ಥೆಗೆ ತಲುಪಿದ್ದು, ಮರಗಳ ಬೇರು ಮಠದ ಒಳಗೆ ನುಗ್ಗಿ ಬಂದಿವೆ. ಇದು ಇಲ್ಲಿಗೆ ಬರುವ ಭಕ್ತರ ಆತಂಕಕ್ಕೂ ಕಾರಣವಾಗಿದೆ.
ಗ್ರಾಮದ ಸಿದ್ದರಾಮೇಶ್ವರ ಮಠದಲ್ಲಿ ಈಗ ಅಯ್ಯಪ್ಪ ಮಾಲಾಧಾರಿಗಳು ಪೂಜೆಯನ್ನು ಮಾಡುತ್ತಿದ್ದಾರೆ. ಈ ರೀತಿ ಮಠದ ಗೋಡೆಗಳು ಬಿರುಕು ಬಿಟ್ಟು, ಮರದ ಬೇರುಗಳು ಒಳಕ್ಕೆ ಬಂದಿರೋದು ಇಲ್ಲಿರುವ ಅಯ್ಯಪ್ಪ ಮಾಲಾಧಾರಿಗಳಲ್ಲೂ ಆತಂಕವನ್ನು ಸೃಷ್ಟಿಸಿದೆ. ಇನ್ನು ಈ ಮಠಕ್ಕೆ ಸುಮಾರು ಐವತ್ತು ವರ್ಷಗಳ ಇತಿಹಾಸ ವಿದ್ದು, ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸುತ್ತಿಲ್ಲ ಎಂಬುದು ಸಹ ಗ್ರಾಮಸ್ಥರ ಆರೋಪವಾಗಿದೆ. ಇಂತಹ ಹಳೆಯ ಮಠಗಳ ಮರು ನಿರ್ಮಾಣಕ್ಕೆ ಮತ್ತು ನಿರ್ವಹಣೆಗೆ ಸಂಬಂಧ ಪಟ್ಟವರು ಮುಂದಾಗಬೇಕು ಎಂಬುದು ಭಕ್ತರ ಆಶಯವಾಗಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
16/12/2021 12:32 pm