ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಚಿವ ಮುನೇನಕೊಪ್ಪ ಸಾಹೇಬ್ರೆ ! ನಿಮ್ಮದೆ ಮತಕ್ಷೇತ್ರದ ರಸ್ತೆ ಸ್ಥಿತಿ ನೋಡ್ರಿ

ಹುಬ್ಬಳ್ಳಿ : ನಮಸ್ಕಾರ ರೀ ಶಂಕರ್ ಪಾಟೀಲ್ ಮುನೇನಕೊಪ್ಪ ಸಾಹೇಬ್ರೆ ನೀವೂ ಮಂತ್ರಿ ಸ್ಥಾನ ಪಡಕೊಂಡ ಆರಾಮ ಅದೀರಿ, ಆದರೆ ನಿಮ್ಮದೆ ನವಲಗುಂದ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಕಡೆ ಹಳ್ಳಿ ಈ ಹಳ್ಯಾಳ ಜನಾ ಕಷ್ಟದಾಗ ಅದಾರ ನೋಡ್ರೀ.

ಮತ್ತ ಹಳ್ಯಾಳ ಮಂದಿ ಅಷ್ಟೇ ಅಲ್ಲಾರಿ ಪಾಪಾ ಈ ಹುಬ್ಬಳ್ಳಿಯಿಂದ ಹಳ್ಯಾಳಕ್ಕೆ ಸಂಪರ್ಕ ಮಾಡೋ ರಸ್ತೆದಾಗ ಓಡಾಡೋ ಎಲ್ಲಾ ಪ್ರಯಾಣಿಕರು ವಾಹನ ಸವಾರರು, ಸಾರಿಗೆ ಬಸ್ ಚಾಲಕ ನಿರ್ವಾಹಕರು, ಅಷ್ಟೇ ಯಾಕ್ರೀ ಪಾ, ಈ ಊರು ದಾರಿ ಒಳಗೆ ಆಂಬುಲೆನ್ಸ್ ಹೋಗೋದು ಕಷ್ಟ ಆಗೇತಿ ಹಿಂಗ್ಯಾಗಿ ಈ ರಸ್ತೆ ಸಂಚಾರ ಮಾಡೋರು ಎಲ್ಲಾರು ಕಷ್ಟದಾಗ ಅದಾರ.

ಅಬಾಬಾ ಸಾಹೇಬ್ರೆ, ಈ ರಸ್ತೆ ಸಮಸ್ಯೆ ನೋಡ್ರಿ ಪಾಪಾ ದಿನಾ ಮಂದಿ ಹೇಂಗ್ ಓಡಾಡಬೇಕು, ನೋಡ್ರಿಲ್ಲಿ ಈ ಪಾಟಿ ತಗ್ಗು, ಗುಂಡಿ, ಅಷ್ಟೇ ಯಾಕ್ರಿ ರಾಡಿ ನೀರ್ ನೋಡ್ರಿ ಇದರಾಗ ಗಾಡಿ ಹೇಂಗ್ ಹೋಗ್ಬೇಕು ಪಾಪಾ ಜನರ ಪರಿಸ್ಥಿತಿ ಏನ್ರೀ ಪಾ ?

ಆ ಮ್ಯಾಗ ಈ ಪರಿಸ್ಥಿತಿ ಹಿಂಗಿದ್ರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೋಡ್ಯಾರೋ ಇಲ್ಲೋ ನೋಡಿದ್ರ ಏನ ? ಕ್ರಮ ತಗೋತಾರ ಅಂತ್, ಜನಾ ಅವರಿಗೆ ಸಮಸ್ಯೆ ಹೇಳಿ ಹೇಳಿ ಸಾಕ್ಯಾಗಿ ಸುಮ್ನ ಆಗ್ಯಾರ.

ಶಂಕರ ಪಾಟೀಲ್ ಮುನೇನಕೊಪ್ಪ ಸಾಹೇಬ್ರೆ ದಯವಿಟ್ಟು ನೋಡ್ರಿ ನಿಮ್ಮದೆ ಮತಕ್ಷೇತ್ರದ ಹಳ್ಯಾಳಕ್ಕೆ ಸುಗಮ ರಸ್ತೆ ಕಲ್ಪಿಸಿ.

Edited By : Shivu K
Kshetra Samachara

Kshetra Samachara

13/12/2021 07:24 pm

Cinque Terre

86.71 K

Cinque Terre

27

ಸಂಬಂಧಿತ ಸುದ್ದಿ