ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತೋರಣಗಟ್ಟಿ ಕೆರೆಗೆ ಬಿದ್ದಿದೆ ಅನೈರ್ಮಲ್ಯದ ಬರೆ !

ಕುಂದಗೋಳ : ಕಳೆದ ಹಲವಾರು ವರ್ಷಗಳಿಂದ ಕೆಸರಿನಲ್ಲಿ ಹಂತ ಹಂತವಾಗಿ ಹುದುಗಿ ಹೋಗುತ್ತಿರುವ ಕುಂದಗೋಳ ಪಟ್ಟಣದ ತೋರಣಗಟ್ಟಿ ಕೆರೆ. ಈ ವರ್ಷದ ಅತಿವೃಷ್ಟಿ ಪರಿಣಾಮ ಮತ್ತಷ್ಟೂ ನೀರು ಸಂಗ್ರಹದ ಜೊತೆ ಪ್ಲ್ಯಾಸ್ಟಿಕ್ ತ್ಯಾಜ್ಯ ಸೇರಿ ರೋಗಗಳ ಬಿಡಾರವಾಗಿದೆ.

ಕುಂದಗೋಳ ಪಟ್ಟಣದ ಬಸ್ ನಿಲ್ದಾಣದ ಹಿಂದೆ ಇರುವ ತೋರಣಗಟ್ಟಿ ಕೆರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಕಸ, ಸಾರಾಯಿ ಪಾಕೆಟ್ ಎಲ್ಲೇಂದರಲ್ಲಿ ಬಿದ್ದಿದ್ದು, ಕೆರೆ ಪಕ್ಕದ ಚರಂಡಿ ಕಸದಿಂದ ಕ್ಲೋಸ್ ಆಗಿ ದುರ್ನಾತ ಬೀರುತ್ತಿದೆ.

ಇದಲ್ಲದೆ ತೋರಣಗಟ್ಟಿ ಕೆರೆಯಲ್ಲಿ ಕೆಲ ವಿದ್ಯುತ್ ಕಂಬಗಳು ಅಪಾಯ ಸೃಷ್ಟಿಸುವ ಹಂತದಲ್ಲಿದ್ದು, ಕೆರೆಯಲ್ಲಿ ಆಳೆತ್ತರಕ್ಕೆ ಕಸ ಬೆಳೆದ ಪರಿಣಾಮ ಕೆರೆಯ ಯಾವುದೇ ದಡ ಗೊತ್ತಾಗದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೆಸ್ಕಾಂ ಅಧಿಕಾರಿಗಳು ಗಮನಿಸಿ ಕನಿಷ್ಠ ಬ್ಲಿಚಿಂಗ್ ಪೌಡರ್, ಕ್ರಿಮಿನಾಶಕ ಸಿಂಪರಣೆ ಜೊತೆ ಕೆರೆ ಪಕ್ಕದ ರಸ್ತೆ ಬೀದಿ ದೀಪಗಳನ್ನು ದುರಸ್ತಿ ಪಡೆಸಬೇಕಿದೆ.

Edited By : Manjunath H D
Kshetra Samachara

Kshetra Samachara

11/12/2021 04:44 pm

Cinque Terre

15.1 K

Cinque Terre

0

ಸಂಬಂಧಿತ ಸುದ್ದಿ