ಧಾರವಾಡ: ಗುರುವೇ ಶಂಭುಲಿಂಗಾ.. ಈ ತೇಜಸ್ವಿನಗರದ ಬ್ರಿಡ್ಜ್ ಒಂದು ಸಾರಿ ನೋಡ್ರಿ ಪಾ ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಡಿದ್ದ ವರದಿಗೆ ಸ್ಪಂದಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೇಜಸ್ವಿನಗರದ ಬ್ರಿಡ್ಜ್ ಮೇಲಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ತೇಜಸ್ವಿನಗರದ ಈ ಬ್ರಿಡ್ಜ್ ಕೆಳಗೆ ರೈಲ್ವೆ ಟ್ರ್ಯಾಕ್ ಕೂಡ ಇದೆ. ಹೀಗಿರುವಾಗ ಬ್ರಿಡ್ಜ್ ಮೇಲಿನ ರಸ್ತೆ ಸಂಪೂರ್ಣ ಹದಗೆಟ್ಟು ರಸ್ತೆ, ಕೆರೆಯಂತೆ ಕಾಣುತ್ತಿತ್ತು. ಈ ಸಂಬಂಧ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯೊಂದನ್ನು ಪ್ರಸಾರ ಮಾಡಿತ್ತು. ವರದಿ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಅಲ್ಲಿನ ಸ್ಥಳೀಯರು ರಸ್ತೆ ಬಂದ್ ಮಾಡಿ ರಸ್ತೆ ಸುಧಾರಣೆ ಮಾಡುವಂತೆ ಆಗ್ರಹಿಸಿದ್ದರು. ನಿನ್ನೆ ರಾತ್ರಿಯೇ ಬ್ರಿಡ್ಜ್ ಮೇಲಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಸ್ತೆಗೆ ಕಾಂಕ್ರೀಟ್ ಭಾಗ್ಯ ಒದಗಿಬಂದಿದೆ.
Kshetra Samachara
06/12/2021 03:02 pm