ಹುಬ್ಬಳ್ಳಿ: ಕಿಶೋರ್ ಬಜಾಜ್ ನಿರ್ಮಾಣದ ಅಡಿಯಲ್ಲಿ ಮೂಡಿ ಬರುತ್ತಿರುವ ವಿಭಿನ್ನ ಕಥಾಹಂದರದ ಚಿತ್ರ ಸರಣಿ "nine deadly sins"ನ ಮೊದಲ ಕಂತಿನ ಚಿತ್ರ ಚಿತ್ರೀಕರಣ ಭರದಿಂದ ಸಾಗಿದೆ.
ಹೌದು.. ಹುಬ್ಬಳ್ಳಿ-ಧಾರವಾಡ ಅವಳಿನಗರದ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಸುಮಿತ್ ಕಾಳೇ ಮತ್ತು ಮಂಜುನಾಥ ಕಾಂಬಳೇ ರಚಿಸಿದ ಕಥೆಯನ್ನು ಧಾರವಾಡ ಡಿಜಿಟಲ್ ಲಾಬೋರೆಟರಿ ನಿರ್ಮಿಸುತ್ತಿದ್ದು, ಮೈಕ ಮುತ್ತು ಮತ್ತು ಕಿಶೋರ್ ಬಜಾಜ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಸಂಗೀತವನ್ನು ಉಲ್ಲಾಸ ಕುಲಕರ್ಣಿ, ಸಂಕಲನ ಮತ್ತು ಛಾಯಾಗ್ರಹಣ ರಾಜೇಶ್ ಬಜಾಜ್, ಪೌಲ್ ಮತ್ತು ಸಾಗರ್, ನಿರ್ಮಾಣ ಸಹಾಯಕರಾಗಿ ಡೇನ್ಜಿಲ್, ನವೀನ ಮತ್ತು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸುಮಿತ್ ಕಾಳೇ ಬರೆದಿದ್ದಾರೆ.
ಒಂಭತ್ತು ವಿಭಿನ್ನ ಕಥೆಗಳನ್ನು ಈ ಚಿತ್ರ ಸರಣಿಯಲ್ಲಿ ಪ್ರತಿ ಚಿತ್ರವು 45 ನಿಮಿಷದ ಕಾಲಾವಧಿ ಹೊಂದಿದ್ದು, ಇಂದಿನ ಬದುಕಿನ ನೈಜ ಚಿತ್ರಣವನ್ನು ವೀಕ್ಷಕರಿಗೆ ನೀಡಲಿದೆ ಎಂದು ನಿರ್ಮಾಪಕರಾದ ಕಿಶೋರ್ ಬಜಾಜ್ ತಿಳಿಸಿದ್ದಾರೆ.
Kshetra Samachara
29/11/2021 06:38 pm