ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮರ್ಯಾದೆ ಮನೆ ಇದ್ದು ಇಲ್ಲದಂತಾದ ಪರಿಸ್ಥಿತಿಯಲ್ಲಿ ತಹಶೀಲ್ದಾರ ಕಚೇರಿ

ಕುಂದಗೋಳ : ಇಡೀ ಕುಂದಗೋಳ ತಾಲೂಕಿಗೆ ಸ್ವಚ್ಚತೆಯಲ್ಲಿ ಮಾದರಿಯಾಗಬೇಕಿದ್ದ ಕುಂದಗೋಳ ತಹಶೀಲ್ದಾರ ಕಚೇರಿ ತನ್ನಲ್ಲೇ ಅನೈರ್ಮಲ್ಯ, ಅಸ್ವಚ್ಚತೆ ತುಂಬಿಕೊಂಡು ಸ್ವಚ್ಚ ಭಾರತ್ ಯೋಜನೆ ಎಲ್ಲಿದೆ ಎಂದು ಕೇಳುತ್ತಿದೆ‌.

ಕುಂದಗೋಳ ತಹಶೀಲ್ದಾರ ಕಚೇರಿಗೆ ಬರೋ ಸಾರ್ವಜನಿಕರು ಅಧಿಕಾರಿಗಳಿಗೆ ಮಲ ಮೂತ್ರ ವಿಸರ್ಜನೆಯೆ ದೊಡ್ಡ ಸಮಸ್ಯೆಯಾಗಿದೆ, ಈಗಾಗಲೇ ತಹಶೀಲ್ದಾರ ಕಚೇರಿಯಲ್ಲಿ ಮೂರು ಶೌಚಾಲಯಗಳಿದ್ದರೂ, ಒಂದು ಶೌಚಾಲಯ ಕಚೇರಿಯ ಹಳೇ ಕಡತ ಹಾಗೂ ಪಿಠೋಪಕರಣ ತುಂಬಿ ಈ ಪಾಟಿ ಗಬ್ಬೆದ್ದು ಹೋಗಿ ಉಪಯೋಗಕ್ಕೆ ಬಾರದಾಗಿದೆ.

ಇನ್ನೇರೆಡು ಶೌಚಾಲಯಗಳು ಅಕಾಲಿಕ ಮಳೆ ಪರಿಣಾಮ ತಹಶೀಲ್ದಾರ ಕಚೇರಿಯಲ್ಲಿ ಸಂಗ್ರಹವಾದ ಕೊಳಚೆ ನೀರಿನಲ್ಲಿ ಹುದುಗಿಹೋಗಿದ್ದು ಸಾರ್ವಜನಿಕರು ಅಧಿಕಾರಿಗಳಿಗೂ ಮಲ ಮೂತ್ರ ವಿಸರ್ಜನೆ ಸಮಸ್ಯೆಗೆ ಮುಕ್ತಿ ಸಿಗದಂತಾದ ಕಾರಣ ತಹಶೀಲ್ದಾರ ಕಚೇರಿಗೆ ಬರೋ ಪುರುಷರು ಕಚೇರಿ ಗೋಡೆಯನ್ನೇ ಮೂತ್ರ ವಿಸರ್ಜನೆ ಸ್ಥಳವನ್ನಾಗಿ ಮಾಡಿ ಬಿಟ್ಟಿದ್ದಾರೆ.

ಇನ್ನೂ ಮುಖ್ಯವಾಗಿ ತಹಶೀಲ್ದಾರ ಕಚೇರಿ ಮಹಿಳಾ ಸಿಬ್ಬಂದಿಗಳು ಹಾಗೂ ಕಚೇರಿಗೆ ವಿವಿಧ ಕೆಲಸ ಹೊತ್ತು ಮಹಿಳೆಯರು ವೃದ್ಧೆಯರ ಪಾಡು ಶೌಚಾಲಯ ಇಲ್ಲದ ಕಾರಣ ಇತ್ತ ಹೇಳಲು ಆಗದೆ ಪರಿಸ್ಥಿತಿ ಅನುಭವಿಸಲು ಆಗದ ಸ್ಥಿತಿಗೆ ಬಂದು ತಲುಪಿದೆ.

ಮಾನ್ಯ ಜಿಲ್ಲಾಧಿಕಾರಿಗಳೇ ತಹಶೀಲ್ದಾರ ಸಾಹೇಬ್ರೆ ದಯವಿಟ್ಟು ಕುಂದಗೋಳ ತಹಶೀಲ್ದಾರ ಕಚೇರಿಗೆ ಬರೋ ಜನತೆಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಕಲ್ಪಿಸಿ.

Edited By : Shivu K
Kshetra Samachara

Kshetra Samachara

29/11/2021 05:25 pm

Cinque Terre

20.83 K

Cinque Terre

2

ಸಂಬಂಧಿತ ಸುದ್ದಿ