ಕುಂದಗೋಳ : ವಿದ್ಯುತ್ ಬಿಲ್ ಹಣ ಪಾವತಿ ಮಾಡದೇ ಇರುವ ಕುಟುಂಬಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಹೆಸ್ಕಾಂ ಇಲಾಖೆ ವಿರುದ್ಧ ಸಾರ್ವಜನಿಕರು ಕಚೇರಿಗೆ ತೆರಳಿ ಧರಣಿ ನಡೆಸಿದ ಪ್ರಸಂಗ ಇಂದು ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಕೇವಲ 2 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇರುವ ಕುಟುಂಬದ ಸೇರಿದಂತೆ 48 ಕುಟುಂಬಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆ 6 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಈ ಪರಿಣಾಮ ಕೋಪಗೊಂಡ ಗ್ರಾಮಸ್ಥರು ನಾವು ವಿದ್ಯುತ್ ಬಿಲ್ ಕಟ್ಟುತ್ತೇವೆ ಆದರೆ ಕಳೆದ ಹಲವಾರು ವರ್ಷಗಳಿಂದ ನಮ್ಮೂರಿನ ವಿದ್ಯುತ್ ಕಂಬಗಳ ದುರಸ್ತಿ ಮಾಡಿಲ್ಲ, ಕೈಗೆ ತಾಗುವಂತೆ ಜೋತು ಬಿದ್ದಿರುವ ವಾಯರ್ ನಿರ್ವಹಣೆ ಮಾಡದೆ ಈಗ ಮನೆ ವಿದ್ಯುತ್ ಬಿಲ್ ಕೇಳಲು ಬಂದು ಸಂಪರ್ಕ ಕಟ್ ಮಾಡಿದ್ದೀರಿ ಇದಾವ್ ನ್ಯಾಯ ಎಂದರು.
ಹೆಸ್ಕಾಂ ಇಲಾಖೆ ಅಧಿಕಾರಿಗಳು ಮೇಲಾಧಿಕಾರಿಗಳು ಹಾಗೂ ಸರ್ಕಾರದ ಆದೇಶದಂತೆ ವಿದ್ಯುತ್ ಸಂಪರ್ಕ ಕಟ್ ಮಾಡಿದ್ದೇವೆ, ನೀವೂ ವಿದ್ಯುತ್ ಬಿಲ್ ಪಾವತಿ ಮಾಡಿದ ಮೇಲೆ ಸಂಪರ್ಕ ಕೊಡುತ್ತೇವೆ ಎಂದರು ಸಧ್ಯ ಹೆಸ್ಕಾಂ ಇಲಾಖೆ ಹಾಗೂ ಗ್ರಾಮಸ್ಥರು ಮಾತಿನ ಚಕಮಕಿ ನಡೆದಿದ್ದು ಗ್ರಾಮಸ್ಥರು ಮೇಲಾಧಿಕಾರಿ ಕರೆಸುವಂತೆ ಒತ್ತಾಯ ಮಾಡುತ್ತಿದ್ದಾರೆ.
Kshetra Samachara
29/11/2021 02:10 pm