ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಟೋಯಿಂಗ್‌ ವಾಹನ ಬರಲ್ಲ : ವಾಹನ ಎತ್ತಲ್ಲ...!

ಹುಬ್ಬಳ್ಳಿ: ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳ ನಿಲ್ಲಿಸಿದರೆ ಈ ಹಿಂದೆ ಪೊಲೀಸರು ಟೋಯಿಂಗ್ ವಾಹನಗಳ ಮೂಲಕ ದ್ವಿಚಕ್ರಗಳನ್ನು ಠಾಣೆಗೆ ತೆಗೆದುಕೊಂಡು ಹೋಗುತ್ತಿದ್ದರು. ಒಂದು ದ್ವಿಚಕ್ರ ವಾಹನ ಠಾಣೆಗೆ ಹೋದರೆ 1650 ರೂ. ದಂಡ ಬೀಳುತ್ತಿತ್ತು . ಇದರಿಂದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಒಂದಿಷ್ಟು ಶಿಸ್ತು ಮೂಡಿತ್ತು. ಆದರೆ ಈಗ ಟೋಯಿಂಗ್ ವಾಹನಗಳ ಕಾರ್ಯಾಚರಣೆ ಕಡಿಮೆಯಾಗಿದ್ದು, ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಹೆಚ್ಚಾಗಿದೆ.

ಕಳೆದ ಜುಲೈ ತಿಂಗಳಿನಿಂದ ಈ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನ ಸವಾರರಲ್ಲಿ ನೋ ಪಾರ್ಕಿಂಗ್ ಭಯ ಇಲ್ಲದಂತಾಗಿದೆ. ಟೋಯಿಂಗ್ ವಾಹನ ಗುತ್ತಿಗೆ ಮುಗಿದಿರುವ ಕಾರಣ ಈ ವ್ಯವಸ್ಥೆ ಸ್ಥಗಿತಗೊಂಡಿದ್ದು, ಪುನಃ ಟೆಂಡರ್‌ ಕಾರ್ಯ ನಡೆದಿಲ್ಲ.

ದುಬಾರಿ ದಂಡ ವಿಧಿಸುವ ಮೊದಲು ಮಹಾನಗರದ ಜನತೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆಯೇ ಎಂಬುವುದನ್ನು ಪೊಲೀಸ್ ಇಲಾಖೆ ಗಮನಿಸಬೇಕು ಅಲ್ಲದೇ ಅಂಧ ದರ್ಬಾರು ನಡೆಸುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಮಗಾರಿಗಳಿಂದ ಓಡಾಡಲು ರಸ್ತೆಗಳೇ ಇಲ್ಲದ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳ ದೂರದ ಮಾತು. ಹೀಗಾಗಿ ಜನರಿಗೆ ವಿನಾಕಾರಣ ತೊಂದರೆ ಕೊಡಬಾರದು ಎನ್ನುವ ಕಾರಣ ಹು-ಧಾ ಕಮಿಷನರೇಟ್‌ ಈ ವ್ಯವಸ್ಥೆಗೆ ತಾತ್ಕಾಲಿಕ ತಡೆ ನೀಡಿದೆ ಎನ್ನಲಾಗಿದೆ.

Edited By : Shivu K
Kshetra Samachara

Kshetra Samachara

27/11/2021 01:36 pm

Cinque Terre

39.97 K

Cinque Terre

3

ಸಂಬಂಧಿತ ಸುದ್ದಿ