ಕುಂದಗೋಳ : ವಿದ್ಯುತ್ ಬಿಲ್ ಹಣ ಪಾವತಿಸದೇ ಉಳಿದಿದ್ದ ಕುಟುಂಬಗಳಿಗೆ ಅವಧಿ ನೀಡಿ ಸಾಕಾದ ಹೆಸ್ಕಾಂ ಇಲಾಖೆ ಅಧಿಕಾರಿಗಳು, ಇಂದು ಆ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾದಾಗ ಗ್ರಾಮಸ್ಥರು ಹಾಗೂ ಹೆಸ್ಕಾಂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ನಡೆದಿದೆ.
ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮಕ್ಕೆ ಹೆಸ್ಕಾಂ ಅಧಿಕಾರಿಗಳು ತೆರಳಿ ಕಳೆದ ಹಲವಾರು ತಿಂಗಳುಗಳಿಂದ ವಿದ್ಯುತ್ ಬಿಲ್ ಹಣ ಪಾವತಿಸದೇ ಇರುವ ಕುಟುಂಬದ ಕರೆಂಟ್ ಕಟ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ರೈತರು ಪೂರ್ತಿ ಹಣ ಬದಲು ಅರ್ಧ ಹಣ ಕಟ್ಟುತ್ತೇವೆ ಎಂದಾಗ ಅಧಿಕಾರಿಗಳು ಬಿಲ್ ಕ್ಲೀಯರ್ ಮಾಡುವಂತೆ ತಿಳಿಸಿದ್ದಾರೆ.
ಈ ವೇಳೆ ಆಕ್ರೋಶಗೊಂಡ ರೈತ ಕುಟುಂಬದವರು ಅತಿವೃಷ್ಟಿ ಪರಿಣಾಮ ಹೊಲದಲ್ಲಿ ಬೆಳೆದ ಹಾಳಾಗಿ ಹೋಗಿದೆ, ಎಲ್ಲಿಂದ ವಿದ್ಯುತ್ ಬಿಲ್ ಪೂರ್ತಿ ಹಣ ಕಟ್ಟೋಣ ? ಎಂದು ಹೊಲದಲ್ಲಿ ಹಾಳಾದ ಮೆಣಸಿನಕಾಯಿ ತಂದು ಅಧಿಕಾರಿಗಳ ಮುಂದೆ ಸುರಿದು ತಮ್ಮ ಪರಿಸ್ಥಿತಿ ವಿವರಿಸಿದ್ದಾರೆ.
ಆದರೆ ಸ್ಥಳಕ್ಕೆ ಬಂದ
ಅಧಿಕಾರಿ ಮೇಲಾಧಿಕಾರಿಗಳು ಹಾಗೂ ಸರ್ಕಾರದ ಆದೇಶದ ಪ್ರಕಾರ ಕರ್ತವ್ಯ ಮಾಡಲೇಬೇಕು ಎಂದಾಗ ರೈತರು ಶಾಸಕಿ ಕುಸುಮಾವತಿ ಶಿವಳ್ಳಿಗೆ ಕರೆ ಮಾಡಿ ವಿಷಯ ತಿಹಿಸಿದ್ದು, ಅಧಿಕಾರಿಗಳು ನಿಮ್ಮ ಜವಾಬ್ದಾರಿಯಂತೆ ನಮಗೂ ಕರ್ತವ್ಯ ಮಾಡಲು ಬಿಡಿ ಎಂದಿದ್ದಾರೆ.
ಒಟ್ಟಾರೆ ಸರ್ಕಾರ ಹಾಗೂ ಮೇಲಾಧಿಕಾರಿಗಳು ಆದೇಶದಲ್ಲಿ ಕರೆಂಟ್ ಕಟ್ ಮಾಡಲು ಬಂದ ಅಧಿಕಾರಿಗಳು ರೈತರು ಸಮಸ್ಯೆ ಸಿಲುಕಿದ್ದು, ಈಗ ಸ್ಥಳಕ್ಕೆ ಹೆಸ್ಕಾಂ ಮೇಲಾಧಿಕಾರಿಗಳು ಭೇಟಿ ನೀಡಲು ಬರಲಿದ್ದಾರೆ.
Kshetra Samachara
27/11/2021 12:56 pm