ಕುಂದಗೋಳ : ಕೊರೊನಾ ಹಾವಳಿ ಕಳೆಯಿತು ಎನ್ನುವುದರ ಒಳಗೆ ಅತಿವೃಷ್ಟಿ ವಕ್ಕರಿಸಿ ಬಡ ಮಧ್ಯಮ ಹಾಗೂ ರೈತರ ಬದುಕು ಕಷ್ಟವಾಗಿದ್ದು ತುತ್ತು ಅನ್ನ ಬೇಯಿಸಿಲು ಸರ್ಕಾರ ನೀಡುತ್ತಿದ್ದ ಪಡಿತರ ಸಾಮಗ್ರಿಗಳಿಂದ ಅದೆಷ್ಟೋ ಜನ ವಂಚಿತರಾಗಿದ್ದಾರೆ.
ಈಗಾಗಲೇ ಕುಟುಂಬದಿಂದ ಬೇರೆಯಾದವರು, ಹಾಗೂ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪಡಿತರ ಸಾಮಗ್ರಿ ಸಿಗುತ್ತಿಲ್ಲ. ಕಾರಣ ಇವರ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಕಾರ್ಯ ಇನ್ನೂ ನಡೆದೆ ಇಲ್ಲಾ. ಈ ಪರಿಣಾಮ ಜನರು ಪಡಿತರ ಸಾಮಗ್ರಿಯಿಂದ ವಂಚಿತರಾಗಿದ್ದಾರೆ.
ಕುಂದಗೋಳ ತಾಲೂಕಿನಲ್ಲಿ 2021 ಜನೇವರಿಯಿಂದ ಇಲ್ಲಿಯವರೆಗೆ ಸಲ್ಲಿಕೆಯಾದ 1039 ಅರ್ಜಿಗಳು ಬಾಕಿ ಇದ್ರೆ ಸಂಪೂರ್ಣ ಧಾರವಾಡ ಜಿಲ್ಲೆಯಲ್ಲಿ 14232 ಪಡಿತರ ಅರ್ಜಿ ಪರಿಶೀಲನೆ ಬಾಕಿ ಇದೆ. ಕಾರಣ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಸರ್ಕಾರಿ ಆಸ್ಪತ್ರೆ, ಶಾಲಾ ಕಾಲೇಜು ದಾಖಲಾತಿ, ಸೇರಿದಂತೆ ಗ್ರಾಮ ಪಂಚಾಯಿತಿ ಅಗತ್ಯ ಸೌಲಭ್ಯಗಳಿಂದ ಪಡಿತರ ಚೀಟಿ ಇಲ್ಲದೆ ಜನ ವಂಚಿರಾಗುವ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಸರ್ಕಾರ 2019 ಮತ್ತು 2020 ರಲ್ಲಿ ಸಲ್ಲಿಕೆಯಾದ ಪಡಿತರ ಅರ್ಜಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದು ಅದರಂತೆ 2021 ರಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿ ಪರಿಶೀಲನೆಗೆ ಕ್ರಮ ಜರುಗಿಲಿ ಎಂಬುದು ಜನರ ಒತ್ತಾಯವಾಗಿದೆ.
- ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
26/11/2021 05:24 pm