ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಆಗ್ತಿಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಮಾರ್ಟ್ ಆಗ್ತಿದ್ದಾರೆ: ಸರಸ್ವತಿಪುರಂ ರಸ್ತೆ ಸಮಸ್ಯೆ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡ್ತೀವಿ... ಸ್ಮಾರ್ಟ್ ಮಾಡ್ತೀವಿ ಅಂತ ಬರಿ ಭರವಸೆಯನ್ನು ಕೊಡುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು.. ಅವರು ಮಾತ್ರ ಸ್ಮಾರ್ಟ್ ಆಗುತ್ತಿದ್ದಾರೆ ವಿನಃ ಹುಬ್ಬಳ್ಳಿ-ಧಾರವಾಡ ಮಾತ್ರ ಸ್ಮಾರ್ಟ್ ಆಗುತ್ತಿಲ್ಲ.

ಸಾರ್ವಜನಿಕ ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಮಾಡಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮಗಳನ್ನು ಜರುಗಿಸಿದೇ ಹುಸಿ ಆಶ್ವಾಸನೆ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪೂರದ ಸರಸ್ವತಿಪುರಂ ರಸ್ತೆಯ ಸಮಸ್ಯೆಗಳನ್ನು ನೋಡಿದರೇ ಎಂತವರಿಗೂ ಮರುಕ ಹುಟ್ಟುತ್ತದೆ‌. ಆದರೆ ನಮ್ಮ ಪಾಲಿಕೆ ಅಧಿಕಾರಿಗಳಿಗೆ ಮಾತ್ರ ಯಾವುದೇ ರೀತಿಯ ಸಮಸ್ಯೆಗಳು ಕೂಡ ಅನುಭವಕ್ಕೆ ಬರುವುದೇ ಇಲ್ಲ.

ಕೆಸರು ತುಂಬಿದ ರಸ್ತೆಗಳು.. ಮೊಣಕಾಲು ಉದ್ದದ ಗುಂಡಿಗಳು... ಸ್ವಲ್ಪ ಯಾಮಾರಿದರು ಬೆನ್ನು ಮೂಳೆ ಮುರಿಯುವ ಇಕ್ಕೆಲಗಳು ಇಂತಹ ಅವ್ಯವಸ್ಥೆ ಆಗರಕ್ಕೆ ಸಾಕ್ಷಿಯಾಗಿರುವುದು ಸರಸ್ವತಿಪುರಂ ರಸ್ತೆ. ಇಲ್ಲಿ ದಿನವೂ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಾರೆ. ಒಂದು ಸಣ್ಣ ಮಳೆ ಬಂದರೂ ಕೂಡ ಕೆಸರಿನ ಗದ್ದೆಯಾಗುವ ಈ ರಸ್ತೆ ಜನರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಇನ್ನೂ ಬೈಕ್ ಸವಾರರ ಸಮಸ್ಯೆ ಅಂತೂ ಹೇಳ ತೀರದಾಗಿದೆ. ಸ್ವಲ್ಪ ಯಾಮಾರಿದರು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವುದಂತೂ ಖಂಡಿತ. ಇಲ್ಲಿ ನಡೆದಾಡುವ ವಿದ್ಯಾರ್ಥಿಗಳ ಗತಿ ಅಂತೂ ದೇವರೇ ಬಲ್ಲ. ಇಷ್ಟು ಸಮಸ್ಯೆ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಪಾಲಿಕೆ ಆಯುಕ್ತರ ಹಾಗೂ ವಲಯ ಕಚೇರಿಯ ಸಹಾಯಕ ಆಯುಕ್ತರ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದೇ ಹುಸಿ ಭರವಸೆಯನ್ನು ನೀಡುತ್ತಿದ್ದಾರೆ.

ಒಟ್ಟಿನಲ್ಲಿ ಅಧಿಕಾರಿಗಳು ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬುವಂತಾಗಿದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೇತ್ತುಕೊಂಡು ಶಾಶ್ವತ ಪರಿಹಾರವನ್ನು ಕಲ್ಪಿಸಬೇಕಿದೆ.

Edited By : Shivu K
Kshetra Samachara

Kshetra Samachara

24/11/2021 04:17 pm

Cinque Terre

47.87 K

Cinque Terre

11

ಸಂಬಂಧಿತ ಸುದ್ದಿ