ಕುಂದಗೋಳ : ನಮಸ್ಕಾರಿ ಕುಂದಗೋಳ ಮಂದಿಗೆ, ಏನ್ರೀ ಕಳೆದ ಹಲವಾರು ದಿನಗಳಿಂದ ಸುರಿದಂತಹ ಅಕಾಲಿಕ ಮಳೆ ಇಲ್ಲೋಂದು ವಿವಿಧ ಇಲಾಖೆಗಳ ಸರ್ಕಾರಿ ಕಚೇರಿ ಸಂಕೀರ್ಣ ಕಟ್ಟಡದಾಗ ಭರ್ತಿ ನೀರು ತುಂಬಿ ಎಮ್ಮೆ ದನಾ ಕರಕ್ಕ ಸ್ವಿಮ್ಮಿಂಗ್ ಪುಲ್ ಮಾಡಿ ಕೊಟೈತಿ ಅಂತಲ್ಲಾ ನಿಮ್ಗೆ ಗೊತ್ತೇನ್ರಿ.
ಹೇ, ಗೊತ್ತಿಲ್ಲಾಂದ್ರೂ ನಾವ್ ಹೇಳ್ತವಿ ಕೇಳ್ರಿ. ಈ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಾಳಿ ತೋಟದಲ್ಲಿ 7 ಕೋಟಿ 64 ಲಕ್ಷ ಖರ್ಚು ಮಾಡಿ ನಿರ್ಮಿಸಿದ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿ ಸಂಕೀರ್ಣ ಕಟ್ಟಡ ಕಳೆದ ಮೂರು ವರ್ಷದಿಂದ ನೀರು ತುಂಬಿ ತುಂಬಿ ಇವಾಗ್ ಕಟ್ಟಡ ಪಿಲ್ಲರ್ ಒಳಗೆ ನೀರು ಜಿನುಗತ್ತಲಿದೆ. ಮತ್ತ್ ಕಟ್ಟಡ ಬಾಜು ಅದ್ ಆ ಪಾರ್ಕಿಂಗ್ ಜಾಗ್ ಪೂರ್ತಿ ಭರ್ತಿ ನೀರು ಸಂಗ್ರಹ ಆಗೈತಿ ಅಲ್ಲಾ, ಅಲ್ಲೇ ಈ ಎಮ್ಮೆಗಳು ಅದನ್ನ್ ಸ್ವಿಮ್ಮಿಂಗ್ ಪೂಲ್ ಮಾಡ್ಕೊಂಡು ನೋಡ್ರಿಲ್ಲೇ ಹಿಂಗ್ ಅಗ್ಗದಿ ಪದ್ಧತ್ ಸೀರ್ ಸ್ವಿಮ್ಮಿಂಗ್ ಮಾಡ್ತಾವ್ ಬ್ಯಾಸರ್ ಅಂತಂದ್ರೆ ಹಿಂಗ್ ಇಲಾಖೆ ಮುಂದೆ ಹಾಯ್ದು ಮನಿಗೆ ಹೋಗ್ತಾವ್.
ಆ ಮ್ಯಾಗ್ ಈ ಕಟ್ಟಡ ಹಿಂಗ್ ನೀರಾಗ್ ನಿಂತಿದ್ದಕ್ಕ್ ಆ ನೀರ್ ಕಟ್ಟಡ ಮ್ಯಾಲ್ ಹತ್ತುವ ಸ್ಥಿತಿ ತಲುಪಿದ್ದಕ್ಕ, ಇಲ್ಲಿ ಕರ್ತವ್ಯ ನಿರ್ವಹಿಸೋ ನಾಲ್ಕು ಇಲಾಖೆ ಅಧಿಕಾರಿ ಹಾಗೂ ಸಾರ್ವಜನಿಕರಿಗೆ ಜೀವ ಭಯ ಶುರುವಾಗೈತಿ. ಮಾನ್ಯ ಜಿಲ್ಲಾಧಿಕಾರಿಗಳೇ ಈ ಕಟ್ಟಡ ಇಲ್ಲಿನ ಅವ್ಯವಸ್ಥೆ ಗಮನಿಸಿ ಅನಾಹುತಕ್ಕೂ ಮೊದಲು ಪರಿಹಾರ ಕಲ್ಪಿಸಿ.
Kshetra Samachara
23/11/2021 06:59 pm