ಹುಬ್ಬಳ್ಳಿ: ಕಳೆದೊಂದು ವಾರದಿಂದ ರಾಜ್ಯಾದ್ಯಂತ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಧಾರವಾಡ ಜಿಲ್ಲೆಯಲ್ಲಿಯೂ ಮಳೆರಾಯನ ಆರ್ಭಟ ಇನ್ನಿಲ್ಲದಂತೆ ನಷ್ಟವುಂಟು ಮಾಡಿದೆ. ಒಂದೆಡೆ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದರೇ ಇನ್ನೊಂದೆಡೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಮಳೆಯಲ್ಲಿ ಕೊಚ್ಚಿ ಹೋಗಿದೆ. ಈ ಮಧ್ಯೆ ವರುಣಾರ್ಭಟಕ್ಕೆ ವಾಣಿಜ್ಯ ನಗರಿಯಲ್ಲಿನ ರಸ್ತೆಗಳೆಲ್ಲಾ ಹಳ್ಳಗಳಂತಾಗಿದ್ದು ರಸ್ತೆಗಳೋ... ಗುಂಡಿಗಳೋ.. ಎನ್ನುವಂತಹ ಸ್ಥಿತಿ ಸ್ಮಾರ್ಟ್ ಸಿಟಿಯಲ್ಲಿ ನಿರ್ಮಾಣವಾಗಿದೆ.
ಎಲ್ಲಿ ನೋಡಿದರೂ ಗುಂಡಿಗಳು.. ವರುಣಾರ್ಭಟಕ್ಕೆ ಹಳ್ಳದಂತಾದ ರಸ್ತೆಗಳು.. ಹೌದು. ಇದೂ ಹುಬ್ಬಳ್ಳಿಯಲ್ಲಿ ಮಳೆಯ ಅವಾಂತರಕ್ಕೆ ಆಗಿರುವ ರಸ್ತೆಗಳ ಸ್ಥಿತಿ, ಸ್ಮಾರ್ಟ್ ಸಿಟಿ ಎನ್ನುವ ಹುಬ್ಬಳ್ಳಿ ಮಹಾನಗರದಲ್ಲಿನ ರಸ್ತೆಗಳು ಕಳೆದೊಂದು ವಾರದಿಂದ ಸುರಿದ ಮಳೆಗೆ ಹಳ್ಳ. ಗುಂಡಿಗಳಂತಾಗಿದ್ದು ರಸ್ತೆಯೋ. ಹಳ್ಳವೋ ಎನ್ನವಂತಾಗಿದೆ. ಮಳೆಯಿಂದ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದ ಪರಿಣಾಮ ವಾಹನ ಸವಾರರು ಪ್ರಯಾಣ ಮಾಡಲು ಪರದಾಡುವಂತಾಗಿದೆ.
ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದು ರಸ್ತೆಗಳಲ್ಲಿ ವಾಹನ ಓಡಾಟಕ್ಕೂ ಸಹ ಪ್ರಯಾಸ ಪಡಬೇಕಾದ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿದೆ. ಹುಬ್ಬಳ್ಳಿಯ ಹಲವಾರು ರಸ್ತೆಗಳಲ್ಲಿ ದೊಡ್ಡದಾದ ಗುಂಡಿಗಳು ಬಿದ್ದ ಪರಿಣಾಮ ವಾಹನ ಸವಾರರು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲಿದ್ದಾರೆ. ಆದರೆ ಬೃಹತ್ತಾದ ಪಾತ್ ಹೋಲ್ ಗಳು ಬಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಯಾವೊಂದು ರಸ್ತೆಯ ಗುಂಡಿಗಳನ್ನು ಮುಚ್ಚಲು ಮುಂದಾಗಿಲ್ಲ. ಅಷ್ಟೇ ಅಲ್ಲ ವಾಣಿಜ್ಯ ನಗರಿಯಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳ ಬಗ್ಗೆಯೂ ಜಿಲ್ಲಾಡಳಿತಕ್ಕೆ ವರದಿ ನೀಡಿಲ್ಲ. ಹೀಗಾಗಿ ಜಿಲ್ಲಾಡಳಿತ ಸಹ ಪಾಲಿಕೆಯಿಂದ ವರದಿ ಬಾರದ ಪರಿಣಾಮ ಸರ್ಕಾರಕ್ಕೆ ವರದಿ ಕಳುಹಿಸಿಲ್ಲ ಅಂತಾರೆ ಜಿಲ್ಲಾಧಿಕಾರಿಗಳು.
ಪಾಲಿಕೆ ಅಧಿಕಾರಿಗಳು ಮಳೆಗಾಲಕ್ಕೂ ಮುನ್ನ ರಸ್ತೆಗಳ ಕಾಮಗಾರಿ ಮಾಡಿಲ್ಲ. ಇದೀಗ ಮಳೆಯಿಂದ ಮತ್ತಷ್ಟು ರಸ್ತೆಗಳು ಹಳ್ಳ ಗುಂಡಿಗಳಂತೆ ಮಾರ್ಪಾಡ ಆದ್ರು ಜಿಲ್ಲಾಡಳಿತಕ್ಕೆ ವರದಿ ನೀಡಿಲ್ಲ. ಹೀಗಾಗಿ ಹುಬ್ಬಳ್ಳಿಯಲ್ಲಿ ವಾಹನ ಸವಾರರು ರಸ್ತೆಗೆ ಇಳಿಯಲು ಭಯಪಡುವಂತಾಗಿದೆ. ಇನ್ನಾದರೂ ನಮ್ಮದೂ ಸ್ಮಾರ್ಟ್ ಸಿಟಿ ಅನ್ನೋ ಪಾಲಿಕೆ ಅಧಿಕಾರಿಗಳು ಹುಬ್ಬಳ್ಳಿಯ ರಸ್ತೆಗಳ ಅವ್ಯವಸ್ಥೆ ಸರಿ ಮಾಡಿದರೇ ಸಾಕು ಅನ್ನುವಂತಾಗಿದೆ.
Kshetra Samachara
22/11/2021 03:49 pm