ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಳ್ಳದಾಟುವುದು ಅನಿವಾರ್ಯ; ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಿಸಬೇಕಿದೆ ಜೀವನ

ಹುಬ್ಬಳ್ಳಿ: ಮಳೆ ನಿಂತರು ಮಳೆಯಿಂದ ಆಗಿರುವ ಅವಾಂತರ ಕೂಡ ಇನ್ನೂ ಕಡಿಮೆ ಆಗಿಲ್ಲ. ಮಳೆಯಿಂದ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು,ಹಳ್ಳ ದಾಟಲು ಗ್ರಾಮಸ್ಥರ ಪರದಾಡುವಂತಾಗಿದೆ.

ಹೌದು.. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಈ ಗ್ರಾಮದ ಜನರ ಕಷ್ಟ ಕೇಳುವವರು ಯಾರು..? ಎಂಬುವಂತ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಅಲ್ಲದೇ ಶಾಶ್ವತ ಪರಿಹಾರ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿ‌ ಸುಸ್ತಾಗಿದ್ದಾರೆ.

ಚಿಕ್ಕ ಬ್ರಿಡ್ಜ್ ಮಾಡುವಂತೆ ಕುಮರಿ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಮೇಲು ಸೇತುವೆ ಇಲ್ಲದೇ ಗ್ರಾಮಕ್ಕೆ ಹೋಗಲು ಹರಸಾಹಸ ಪಡಬೇಕಿದೆ. ಕಲಘಟಗಿಯಿಂದ ಕುಮರಿ ಗ್ರಾಮಕ್ಕೆ ಜನರು ನಿತ್ಯ ಸಂಚಾರ ಮಾಡಲೇಬೇಕು. ತಮ್ಮ ದಿನ ನಿತ್ಯದ ಕೆಲಸಗಳಿಗಾಗಿ, ದಿನಬಳಕೆಯ ವಸ್ತುಗಳ ಖರೀದಿಗಾಗಿ ಹಳ್ಳ ದಾಟಿ ಬರಲೇಬೇಕು. ಈ ಸಮಯದಲ್ಲಿ ಕೈಯಲ್ಲಿ ಜೀವ ಹಿಡಿದುಕೊಂಡು ಹಳ್ಳ ದಾಟುವಂತಾಗಿದೆ.

ಇನ್ನೂ ಗ್ರಾಮಕ್ಕೆ ಸಂಚಾರ ಕಲ್ಪಿಸುವ ಪ್ರಮುಖ ರಸ್ತೆಯೇ ಇಲ್ಲದಂತಾಗಿದ್ದು, ಮಳೆ ಬಂತು ಅಂದರೆ ಈ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷವು ಮಳೆಗಾಲದಲ್ಲಿ ಇದೆ ರೀತಿ ತತ್ತರಿಸಿ ಹೋಗುತ್ತಿದ್ದಾರೆ. ರಸ್ತೆ ಮಧ್ಯದಲ್ಲಿ ಇರುವ ಹಳ್ಳಕ್ಕೆ ಸಣ್ಣ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/11/2021 03:04 pm

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ