ನವಲಗುಂದ : ಇದು ನವಲಗುಂದ ಪಟ್ಟಣದಲ್ಲಿನ ತಾಲೂಕು ಆಸ್ಪತ್ರೆಯ ಆವರಣ. ಈ ಆವರಣದಲ್ಲಿ ರಾಜಾರೋಷವಾಗಿ ಹಂದಿಗಳು ತಿರುಗಾಡ್ತವೆ, ಸ್ವಚ್ಛತೆ ಇಲ್ಲ ಅಂತ ಈಗಾಗಲೇ ಸುದ್ದಿ ಕೂಡ ಬಿತ್ತರವಾಗಿದೆ. ಆದರೂ ಯಾವ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈಗ ನಾವು ಇದೆ ವಿಷಯಕ್ಕೆ ಸಂಬಂಧಿಸಿದಂತೆ ಈ ಆವರಣ ಗುಂಡಿಗಳ ಆವರಣ ಎಂದು ಹೇಳೋಕೆ ಹೊರಟಿದ್ದೇವೆ.
ಅದು ಯಾಕೆ ಅಂದ್ರೆ, ಆಸ್ಪತ್ರೆಯ ಹಿಂಭಾಗ ತುರ್ತು ಚಿಕಿತ್ಸಾ ಘಟಕ ಇದೆ. ಇದು ಆಂಬುಲೆನ್ಸ್ ಸಂಚರಿಸುವ ಪ್ರಮುಖ ಮಾರ್ಗ. ಆಸ್ಪತ್ರೆಯ ಮುಂಭಾಗವೇನೋ ಅಚ್ಚುಕಟ್ಟಾಗಿದೆ ಆದರೆ ಹಿಂಭಾಗ ಮಳೆಯಿಂದ ಸಂಪೂರ್ಣ ನೀರು ನಿಂತಿದೆ. ಇನ್ನು ಆಂಬುಲೆನ್ಸ್ ನಲ್ಲಿ ಬಂದ ರೋಗಿಗಳಿಗೆ ಇದು ಸಂಕಷ್ಟಕಕ್ಕೆ ದೂರುವ ಸ್ಥಳ ಎಂದರು ತಪ್ಪಿಲ್ಲ. ಅಷ್ಟೇ ಅಲ್ಲದೇ ಇದರಿಂದ ಸಾಂಕ್ರಾಮಿಕ ರೋಗದ ಕಾಟ ಕೂಡ ಇಲ್ಲಿ ಹೆಚ್ಚಾಗಬಹುದು. ಇಷ್ಟೆಲ್ಲಾ ಆವರಣ ಹದಗೆಟ್ಟರು ಇದುವರೆಗೂ ಯಾರು ಗಮನ ಹರಿಸಿಲ್ಲ. ಕೂಡಲೇ ಗುಂಡಿಗಳನ್ನು ಮುಚ್ಚಿ ಸುಸರ್ಜಿತ ಸ್ಥಳ ನಿರ್ಮಾಣ ಮಾಡಬೇಕಿದೆ. ಇಲ್ಲವಾದಲ್ಲಿ ವೃದ್ಧರು ಸೇರಿದಂತೆ ರೋಗಿಗಳ ಪಾಡು ಹೇಳತೀರದ್ದಾಗಿ ಬಿಡುತ್ತೆ..
Kshetra Samachara
19/11/2021 05:11 pm