ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಆ್ಯಂಬುಲೆನ್ಸ್ ಸಹ ಬಾರದಷ್ಟು ಹದಗೆಟ್ಟ ರಸ್ತೆ, ಯಾವಾಗ ಕಟ್ಟುವಿರಿ ಬ್ರಿಡ್ಜ್ ?

ವೀಕ್ಷಕರ ವರದಿ

ಕುಂದಗೋಳ : ನಮಸ್ಕಾರಿ ಕುಂದಗೋಳ ತಾಲೂಕಿನ ಜನಪ್ರತಿನಿಧಿಗಳೇ ಹಾಗೂ ಹುಬ್ಬಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ..

ದಯವಿಟ್ಟು ನೀವೊಮ್ಮೆ ಹುಬ್ಬಳ್ಳಿಯಿಂದ ಕಟ್ನೂರು, ಗಿರಿಯಾಲ, ಮಾವನೂರು ಹೋಗುವ ದಾರಿಯಲ್ಲೇ ಇರುವ ರೊಟ್ಟಿ ತಿನ್ನುವ ಹಳ್ಳದ ಪರಿಸ್ಥಿತಿ ನೋಡ್ರಿ ಯಾವ್ ರೀತಿ ಆಗೇತಿ ಅಂದ್ರೆ, ಮಳೆ ಆಯ್ತಪ್ಪಾ ಅಂದ್ರ ಆ ಊರಿಗೆ ಬಸ್ಸ್ ಕಾರು ಮೋಟಾರು ಅಲ್ಲಾ ಆಂಬುಲೆನ್ಸ್ ಹೋಗೋದು ಕಷ್ಟ ಆಗೇತಿ.

ಇಂತಹ ಪರಿಸ್ಥಿತಿ ಒಳಗೆ ಅಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಉದ್ಯೋಗಸ್ಥರು ಈ ಪಾಟಿ ತುಂಬಿ ಹರಿಯೋ ಹಳ್ಳ ದಾಟಿ ಹುಬ್ಬಳ್ಳಿ ಸೇರೋದು ಹೇಂಗ್ ? ಕಳೆದ ನಾಲ್ಕೈದು ವರ್ಷಗಳಿಂದ ಈ ಪರಿಸ್ಥಿತಿ ಹಿಂಗ್ ಇದ್ರೂ ಈ ಅಧಿಕಾರಿಗಳು ನೀರು ಬಂದಾಗ್ ರಸ್ತೆ ಬಂದ್ ಆದಾಗ ಬರೋದು ಮಣ್ಣ ಹಾಕೋದು ಹೋಗೋದು ಇದೇ ಕಥೆ ಆಯ್ತು.

ದಯವಿಟ್ಟು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಈ ರಸ್ತೆ ಮೇಲೆ ಹರಿಯುತ್ತಾ ಸಂಚಾರಕ್ಕೆ ಸಮಸ್ಯೆ ತರೋ ರೊಟ್ಟಿ ತಿನ್ನುವ ಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಮಾಡ್ರಿ ಎಂಬುದು ಸಾರ್ವಜನಿಕರ ಒತ್ತಾಯ ಐತಿ ನೋಡ್ರಿ ಪಾ.

Edited By : Nagesh Gaonkar
Kshetra Samachara

Kshetra Samachara

18/11/2021 05:44 pm

Cinque Terre

39.9 K

Cinque Terre

1

ಸಂಬಂಧಿತ ಸುದ್ದಿ