ವರದಿ: ರೇವನ್ ಪಿ.ಜೇವೂರ್ PublicNext ಹುಬ್ಬಳ್ಳಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚಾರಕ್ಕೆ ಒಳ್ಳೆ ರೋಡ್ ಇದೆ. ವೇಗವಾಗಿ ಸಾಗಲು ಚಿಗರಿ ಬಸ್‌ಗಳೂ ಇವೆ. ಅಪಘಾತ ತಪ್ಪಿಲು ಸಿಗ್ನಲ್‌ಗಳೂ ಚೆನ್ನಾಗಿವೆ. ಆದರೆ ಅವುಗಳನ್ನ ಫಾಲೋ ಮಾಡುವ ವ್ಯವಧಾನವೇ ಇಲ್ವಾ?
ನವನಗರ ಕಮಿಷನರ್ ಆಫೀಸ್ ಸಮೀಪ ಇರುವ ಸಿಗ್ನಲ್ ನಲ್ಲಿ ಈಗ ನಾವು ಹೇಳಿದ ಸ್ಥಿತಿನೇ ಇದೆ. ನೋಡಿ. ಈ ಸಿಗ್ನಲ್ ಒಂದು ರೀತಿ ಹಾವು ಮತ್ತು ಏಣಿ ಆಟದ ಚಾರ್ಟ್ ತರವೇ ಇದೆ. ಎತ್ತ ಕಡೆಗೆ ಹೋದರೂ ಹಾವು ಕಡೆಯುತ್ತದೆ ಅಂತಾರಲ್ಲ. ಹಾಗಿದೆ ಈ ಸಿಗ್ನಲ್ ಸ್ಥಿತಿ. ಸಿಗ್ನಲ್ ಕೇರ್ ಮಾಡದೇ ರಸ್ತೆ ದಾಟಿದರೇ ಮುಗಿದೇ ಹೋಯಿತು. ಅಪಘಾತ ಗ್ಯಾರಂಟಿನೇ ನೋಡಿ. ಹೌದು ನವನಗರದ ಕಮಿಷ್ನರ್ ಆಫೀಸ್ ಸಮೀಪವೇ ಈ ಟಿಪಿಕಲ್ ಸಿಗ್ನಲ್ ಇದೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಸಿಗ್ನಲ್ ಜಂಪ್ ಮಾಡಿ ಹೋದ್ರೋ ಗ್ಯಾರಂಟಿ ತಗಲುಹಾಕಿಕೊಳ್ತಾರೆ. ಬಿಆರ್್ಟಿಸಿ ಡ್ರೈವರ್ ಮೂಡ್ ಸಿರಿಯಿದ್ರೆ ಸರಿ. ಇಲ್ಲದೇ ಇದ್ರೆ ಅಪಘಾತ ಸಂಭವಿಸಿಯೇ ಬಿಡುತ್ತದೆ.
ಕಾರು-ಬೈಕು-ಬಸ್ ಎಲ್ಲವೂ ಇಲ್ಲಿ ಓಡಾಡುತ್ತವೆ. ಸಿಗ್ನಲ್ ಕೂಡ ಚೆನ್ನಾಗಿಯೇ ಕೆಲಸ ಮಾಡುತ್ತವೆ.ಆದರೆ, ಇವುಗಳನ್ನ ಫಾಲೋ ಮಾಡೋ ಮನಸ್ಸು ಮತ್ತು ಸಹನೆ ಎರಡೂ ಯಾರಿಗೂ ಇಲ್ಲಿ ಇದ್ದಂತೆ ಕಾಣೋದೇ ಇಲ್ಲ.
ಸಿಗ್ನಲ್ ಫಾಲೋ ಮಾಡಿ ಅಂತ ಹೇಳೋಕೆ ಇಲ್ಲಿ ಪೊಲೀಸರೂ ಇಲ್ಲ. ಅದ್ದಕೋ ಏನೋ ಜನ ಇಲ್ಲಿ ಮನಸೋಯಿಚ್ಚೆ ಸಂಚಾರ ಮಾಡ್ತಾನೆ ಇದ್ದಾರೆ. ಅಪಘಾತಗಳು ಇಲ್ಲಿ ಸಂಭವಿಸುತ್ತಲೇ ಇವೆ. ಯಾರಿಗೆ ಹೇಳೋಣ ಇಲ್ಲಿಯ ಪ್ರಾಬ್ಲಮ್ಮು ಅನ್ನೊ ಹಂಗಿದೆ ಇಲ್ಲಿಯ ಈಗಿನ ಸ್ಥಿತಿ.
Kshetra Samachara
18/11/2021 05:00 pm