ಹುಬ್ಬಳ್ಳಿ: ವಿಮಾನ ನಿಲ್ದಾಣ ಅಂದರೆ ಭದ್ರತೆಗೆ ಪ್ರಮುಖ ಆದ್ಯತೆ ಇದ್ದೆ ಇರುತ್ತದೆ. ಆದರೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ.
ವಿಮಾನ ನಿಲ್ದಾಣದ ಒಳಗೆ ಬೆಳೆದಿರುವ ಕಸವನ್ನು ಮೆಯಲು ಕುದುರೆ ಹಾಗೂ ಕತ್ತೆ ಆಗಮಿಸಿದ ಘಟನೆ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ವಿಮಾನ ನಿಲ್ದಾಣಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಉಮೇಶ ಕತ್ತಿ ಬೆಂಗಳೂರಿನಿಂದ ಆಗಮಿಸಿದ್ದರು. ಈ ಸಮಯದಲ್ಲಿ ಕುದುರೆಯೊಂದು ಆರಾಮಾಗಿ ಹುಲ್ಲನ್ನು ತಿನ್ನುತ್ತಾ ಓಡಾಡುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿಗೆ ಕಂಡು ಬಂದಿದೆ.
ಇದನ್ನು ನೋಡಿದರೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಭದ್ರತಾ ವೈಫಲ್ಯ ಮೆಲ್ನೋಟಕ್ಕೆ ಕಂಡು ಬರುತ್ತಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಬಂದೋಬಸ್ತ್ ನಲ್ಲಿ ಇರುತ್ತಾರೆ. ಕುದುರೆ ವಿಮಾನ ನಿಲ್ದಾಣದ ಒಳಗಡೆ ಹೇಗೆ ಬಂದಿದೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗುತ್ತಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ರೀತಿ ಪ್ರಾಣಿಗಳು ಒಳ ಬರುತ್ತಿದ್ದರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.
Kshetra Samachara
15/11/2021 02:39 pm