ನವಲಗುಂದ : ನವಲಗುಂದ ಪಟ್ಟಣದ ಜನಬೀಡಿತ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿಲ್ಲಿಸಲಾಗುತ್ತಿರುವ ವಾಹನಗಳಿಂದ ಸಂಚಾರಕ್ಕೆ ಸಾಕಷ್ಟು ತೋಡಕಾಗುತ್ತಿದ್ದು, ಇಂದು ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆದುವಂತಾಗಿತ್ತು.
ಹೌದು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ, ಪಟ್ಟಣದ ಬಸ್ ನಿಲ್ದಾಣದ ಎದುರು ಹಾದು ಹೋಗುತ್ತೆ, ಇಲ್ಲಿ ಜನರ ಓಡಾಟ ಅಂಗಡಿ ಮುಂಗಟ್ಟುಗಳು ಹೆಚ್ಚಿರುವುದರಿಂದ ಇದೇ ರಸ್ತೆಯ ಮೇಲೆ ಕಾರು, ಬೈಕು ಸೇರಿದಂತೆ ಹಲವು ವಾಹನಗಳ ನಿಲುಗಡೆ ಕೂಡ ಹೆಚ್ಚಿದೆ. ಇದರಿಂದ ಇಲ್ಲಿ ಸಂಚಾರ ನಡೆಸುವ ಬೃಹತ್ ಗಾತ್ರದ ವಾಹನಗಳಿಗೆ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದ್ದು, ಇದರಿಂದ ಇಂದು ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಉಂಟಾಗಿ, ವಾಹನಗಳು ಸಾಲುಗಟ್ಟಲೆ ನಿಂತಿದ್ದು, ಪ್ರಯಾಣಿಕರು ಪರದಾಟ ನಡೆಸುವಂತಾಗಿತ್ತು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.
Kshetra Samachara
13/11/2021 07:03 pm