ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತಿಂಗಳುಗಳೇ ಕಳೆದರೂ ಬಂದಿಲ್ಲ ವಾಟರ್ ಬಿಲ್: ಜಲಮಂಡಳಿಯ ನಿಷ್ಕಾಳಜಿಯಿಂದ ಜನರಿಗೆ ಸಮಸ್ಯೆ

ಹುಬ್ಬಳ್ಳಿ: ಮೂರು ತಿಂಗಳ ಆಯ್ತು ಇನ್ನೂ ವಾಟರ್ ಬಿಲ್ ಬಂದಿಲ್ಲ. ಒಮ್ಮೆಲೇ ವಾಟರ್ ಬಿಲ್ ಬಂದರೇ ಹೇಗೆ ಕಟ್ಟುವುದು. ಲಾಕ್ ಡೌನ್ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟ ಆಗಿತ್ತು. ಈಗ ಒಮ್ಮೆಲೆ ವಾಟರ್ ಬಿಲ್ ಬಂದರೇ ಏನು ಮಾಡುವುದು. ಇದೆಲ್ಲಾ ವಾಣಿಜ್ಯನಗರಿ ಹುಬ್ಬಳ್ಳಿಯ ಜನರ ಚಿಂತೆಯ ಮಾತು..

ನೀರು ಸರಬರಾಜು ಸೇವೆಯನ್ನು ಜಲಮಂಡಳಿಯಿಂದ ಖಾಸಗಿ ಕಂಪನಿಯಾದ ಎಲ್ ಆ್ಯಂಡ್ ಟಿ ಗೆ ನೀಡಿದ್ದು, ಇದರಿಂದ ಹುಬ್ಬಳ್ಳಿ ಧಾರವಾಡ ಬಹುತೇಕ ಸಾರ್ವಜನಿಕರಿಗೆ ಮೂರು ತಿಂಗಳಿನಿಂದ ವಾಟರ್ ಬಿಲ್ ಬಂದಿಲ್ಲ. ಇದರಿಂದ ಆತಂಕಗೊಂಡ ಜನ ಒಮ್ಮೆಲೆ ವರ್ಷದ ಬಿಲ್ ಬಂದರೆ ಕಟ್ಟುವುದು ಹೇಗೆ ಎಂಬು ಚಿಂತೆಯಲ್ಲಿದ್ದಾರೆ.

ಸದ್ಯ ಜಲಮಂಡಳಿಯವರ ಈ ಅವ್ಯವಸ್ಥೆಯಿಂದ ಜನ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಪಾಲಿಕೆ ಆಯುಕ್ತರು ನೀಡಿರುವ ಪ್ರತಿಕ್ರಿಯೆ ಹೀಗಿದೆ.

ಈಗಾಗಲೇ ಪಾಲಿಕೆಯಿಂದ ಜಲಮಂಡಳಿಗೆ ನಿರ್ದೇಶನ ನೀಡಿದ್ದು, ಖಾಸಗಿ ಕಂಪನಿಗೆ ಹಸ್ತಾಂತರ ಮಾಡುವಂತೆ ಆದೇಶ ನೀಡಲಾಗಿದೆ. ಆದರೆ ಜಲಮಂಡಳಿಯವರ ನಿಷ್ಕಾಳಜಿಯಿಂದಲೋ ಅಥವಾ ಹಣದ ವ್ಯವಹಾರದಿಂದಲೋ ಖಾಸಗಿ ಕಂಪನಿಗೆ ಹಸ್ತಾಂತರ ಮಾಡಿಲ್ಲ. ಜಲಮಂಡಳಿಯವರು ಮಾಡಿರುವ ಸಮಸ್ಯೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವುದಂತೂ ಸತ್ಯ..

ಒಟ್ಟಿನಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಅನುಭವಿಸಿರುವ ಸಾರ್ವಜನಿಕರಿಗೆ ಒಮ್ಮೆಲೆ ದೊಡ್ಡ ಮೊತ್ತದ ಕರ ಪಾವತಿಸುವಂತೆ ಸಮಸ್ಯೆಯನ್ನು ತಂದೊಡ್ಡದೇ ಕೂಡಲೇ ಸಮಸ್ಯೆ ಬಗೆಹರಿಸಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.

Edited By : Manjunath H D
Kshetra Samachara

Kshetra Samachara

11/11/2021 04:43 pm

Cinque Terre

31.27 K

Cinque Terre

5

ಸಂಬಂಧಿತ ಸುದ್ದಿ