ಕುಂದಗೋಳ : ಪಟ್ಟಣದಿಂದ ಕಮಡೊಳ್ಳಿಗೆ ಸಂಪರ್ಕ ಕಲ್ಪಿಸುವ ರೈತಾಪಿ ಜನರ ಒಳಮಾರ್ಗದ ರಸ್ತೆ ಅಕ್ಷರಶಃ ಕುಡುಕರು ಅಡ್ಡೆಯಾಗಿದ್ದು, ಈ ರಸ್ತೆಯಲ್ಲಿ ನಿತ್ಯವೂ ಪೊಲೀಸ್ ಬೀಟ್ ಹಾಕಿ ಎಂದು ರೈತರು ರಸ್ತೆ ಸಂಚಾರಿಗಳು ಒತ್ತಾಯ ಮಾಡುತ್ತಿದ್ದಾರೆ.
ಹೌದು ! ಕುಂದಗೋಳ ಪಟ್ಟಣದಿಂದ ಕಮಡೊಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯುದ್ಧಕ್ಕೂ ಹಗಲು ಮತ್ತು ರಾತ್ರಿ ಕುಡುಕರು ಹಾವಳಿ ಹೆಚ್ಚಾಗಿದೆ, ಈ ಪರಿಣಾಮ ರೈತರ ಹೊಲಗಳಲ್ಲಿ ರಸ್ತೆ ಅಕ್ಕ ಪಕ್ಕ ರಾಶಿ ರಾಶಿ ಸಾರಾಯಿ ಬಾಟಲಿ, ಗ್ಲಾಸ್, ನೀರಿನ ಪಾಕೆಟ್ ಬಿದ್ದಿದ್ದು ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟಾಗಿ ರೈತರ ಬೆಳೆ ಹಾಳಾಗುತ್ತಿವೆ.
ಇನ್ನೂ ಈ ರಸ್ತೆ ಮೂಲಕ ಮಹಿಳೆಯರನ್ನು ಕರೆದುಕೊಂಡು ಪ್ರಯಾಣ ಬೆಳೆಸುವ ಬೈಕ್ ಸವಾರರಿಗೆ ಕುಡಕರ ಭಯ ಅತಿಯಾಗಿದೆ. ಇದಲ್ಲದೆ ರೈತರು ತಮ್ಮ ತಮ್ಮ ಹೊಲಗಳ ದಾರಿಗೆ ಮುಳ್ಳು ಇಟ್ಟು, ಜನರಿದ್ದಾರೆ ಎಂಬಂತೆ ಬಟ್ಟೆ ಕಟ್ಟಿ ಕುಡುಕರಿಂದ ಪಾರಾಗುವ ಉಪಾಯ ಕಂಡುಕೊಂಡಿದ್ದರು, ಕುಡುಕರ ಹಾವಳಿ ಕಡಿಮೆ ಆಗಿಲ್ಲಾ.
ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಗಮನಿಸಿ ಕುಡುಕರ ಆಟಾಟೋಪಕ್ಕೆ ಕಡಿವಾಣ ಹಾಕಿ ಮಹಿಳೆಯರು ಮತ್ತು ಅನ್ನದಾತನ ಹೊಲಕ್ಕೆ ರಕ್ಷಣೆ ಕೊಡಬೇಕಿದೆ.
Kshetra Samachara
11/11/2021 04:07 pm