ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯು ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಜೋರಾಗಿ ನಡೆಸಿದ್ದು, ವಲಯ ಕಚೇರಿ 5 ವ್ಯಾಪ್ತಿಯಲ್ಲಿ ಜೆಸಿಬಿ ಸದ್ದು ಜೋರಾಗಿದೆ.
ಹೌದು. ಹಳೆಯ ವಾರ್ಡ್ ನಂಬರ 27ರ ವ್ಯಾಪ್ತಿಯಲ್ಲಿ ಬರುವ ಉಣಕಲ್ ಗ್ರಾಮದಲ್ಲಿ ಸಾರ್ವಜನಿಕ ಆಸ್ತಿಯನ್ನು ಆಕ್ರಮಿಸಿಕೊಂಡು ನಿರ್ಮಾಣ ಮಾಡಿದ್ದ ಮನೆ ಹಾಗೂ ಶೆಡ್ ತೆರವು ಮಾಡುವ ಮೂಲಕ ಮನೆಯ ಮಾಲೀಕರಿಗೆ ಬಿಸಿ ಮುಟ್ಟಿಸಲಾಗಿದೆ. ಪಾಲಿಕೆ ವತಿಯಿಂದ ಕೆಎಂಸಿ 1976 ಕಲಂ 288(ಡಿ) ಅನ್ವಯ ಪಾಲಿಕೆ ಆಯುಕ್ತರ ನಿರ್ದೇಶನದ ಮೇರೆಗೆ ತೆರವುಗೊಳಿಸಲಾಯಿತು.
Kshetra Samachara
10/11/2021 10:30 pm