ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ರಯಾಣಿಕರ ಸುರಕ್ಷತೆ ಮರೆತು ಜನ ತುಂಬಿದ ಅಧಿಕಾರಿಗಳು ಓಡಿದ ಬಸ್

ಕುಂದಗೋಳ : ಸಾರಿಗೆ ಬಸ್ ಒಳಗೆ ಇಷ್ಟೇ ಜನ ಪ್ರಯಾಣ ಮಾಡ್ಬೇಕು, ಸಾರಿಗೆ ಬಸ್ ಸುಭದ್ರವಾಗಿ ಇರಬೇಕು ಎಂಬ ನಿಯಮವನ್ನು ಈ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ಇಬ್ಬರು ಮರೆತು ಬಿಟ್ಟಿದ್ದಾರೆ ನೋಡಿ.

ಹೌದು ! ಇತ್ತಿಚೆಗೆ ಎಲ್ಲಿ ? ನೋಡಿದರಲ್ಲಿ ಸಾರಿಗೆ ಸಮಸ್ಯೆ, ನೊರೆಂಟು ಪ್ರತಿಭಟನೆ ಇವೆಲ್ಲದರ ನಡುವೆ ಇಂದು ಸಾರಿಗೆ ಬಸ್ ಜನರಿಂದ ತುಂಬಿ ತುಳುಕುತ್ತಿದ್ದರೂ, ಈ ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆಯ ಮಟ್ಟ ಮೀರಿ ಬಸ್'ಗೆ ಜನರನ್ನು ತುಂಬಿಸಿದ್ರೇ ಈ ಜನ ಸುಮ್ಮ್ನೆ ಬಸ್ ಹತ್ತಿದ್ದಾರೆ, ಇನ್ನೂ ಸ್ವತಃ ಕಂಡಕ್ಟರ್ ತನಗೆ ಬಸ್ ಹತ್ತಲೂ ಜಾಗವಿರದೇ ಡ್ರೈವರ್ ಸೀಟ್ ಪಕ್ಕದ ಕಿರು ಬಾಗಿಲಲ್ಲಿ ನುಸುಳಿ ಬಸ್ ಹತ್ತಿ ಇಕ್ಕಟ್ಟಾದ ಜಾಗದಲ್ಲೇ ನಿಂತು ಪ್ರಯಾಣಿಸಿದ್ದಾರೆ.

ಇವೆಲ್ಲಾ ಪ್ರಸಂಗ ನಡೆದದ್ದು ಕುಂದಗೋಳ ಬಸ್ ನಿಲ್ದಾಣದಲ್ಲಿ ದೇವನೂರು ಬಿಳೇಬಾಳ ಬಸ್'ಗೆ ಈ ಪಾಟಿ ಜನ ಅದು ಸಾರಿಗೆ ನಿರ್ವಾಹಕರ ಜೊತೆ ವಾಗ್ವಾದ ಮಾಡಿ ಬಸ್ ಏರಿದ್ದಾರೆ.

ಇವತ್ತೇನೋ ಬಸ್ ಊರು ತಲುಪಿತು, ಇದೇ ಸಂದರ್ಭ ಏನಾದ್ರೂ ಅವಘಡ ಆದ್ರೇ ಯಾರು ಹೊಣೆ ಸಾರಿಗೆ ನಿರ್ವಾಹಕರಾ ? ಅಥವಾ ಈ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರಾ ? ಮಾನ್ಯ ಕೇಂದ್ರಿಯ ಸಾರಿಗೆ ಅಧಿಕಾರಿಗಳೇ, ಈ ಬಗ್ಗೆ ಗಮನಿಸಿ ನಿತ್ಯದ ಈ ಸಂಕಟದ ಪ್ರಯಾಣಕ್ಕೆ ಬೇರೆ ಮಾರ್ಗ ತೋರಿಸಿ.

Edited By : Nagesh Gaonkar
Kshetra Samachara

Kshetra Samachara

09/11/2021 09:10 pm

Cinque Terre

54.61 K

Cinque Terre

4

ಸಂಬಂಧಿತ ಸುದ್ದಿ